For the best experience, open
https://m.suddione.com
on your mobile browser.
Advertisement

ಹೆದ್ದಾರಿಗಳ ಅಭಿವೃದ್ದಿ ಯೋಜನೆಯಡಿ ಚಿತ್ರದುರ್ಗಕ್ಕೆ ಆದ್ಯತೆ ನೀಡಿ : ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಸಂಸದ ಗೋವಿಂದ ಕಾರಜೋಳ ಮನವಿ

05:05 PM Jul 26, 2024 IST | suddionenews
ಹೆದ್ದಾರಿಗಳ ಅಭಿವೃದ್ದಿ ಯೋಜನೆಯಡಿ ಚಿತ್ರದುರ್ಗಕ್ಕೆ ಆದ್ಯತೆ ನೀಡಿ   ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಸಂಸದ ಗೋವಿಂದ ಕಾರಜೋಳ ಮನವಿ
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೆದ್ದಾರಿಗಳ ಅಭಿವೃದ್ದಿ ಯೋಜನೆಯಡಿ ಪ್ರಥಮ ಆದ್ಯತೆ ನೀಡಿ ಯೋಜನೆಗಳನ್ನು ಮಂಜೂರು ಮಾಡುವಂತೆ ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ದೆಹಲಿಯಲ್ಲಿ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement
Advertisement

1. ರಾಷ್ಟ್ರೀಯ ಹೆದ್ದಾರಿ-48 ರ ಹಿರಿಯೂರು ಬಳಿ ಚಿತ್ರದುರ್ಗದ ಹೊರವಲಯದಂತೆಯೇ ಕ್ಲೋವರ್‌ಲೀಫ್ ಜಂಕ್ಷನ್ ನಿರ್ಮಾಣ ಮಾಡುವುದು:

ರಾಷ್ಟ್ರೀಯ ಹೆದ್ದಾರಿ-48 (ದೆಹಲಿ-ಚೆನ್ನೈ ಹೆದ್ದಾರಿ) ಹಾಗೂ ರಾಷ್ಟ್ರೀಯ ಹೆದ್ದಾರಿ -150ಎ (ಜೇವರ್ಗಿ-ಚಾಮರಾಜನಗರ)ಗಳು ಹಿರಿಯೂರು ನಗರದ ಮಿತಿಯಲ್ಲಿ ಒಂದಕ್ಕೊಂದು ಛೇಧಿಸುತ್ತವೆ.

Advertisement
Advertisement

ರಾಷ್ಟ್ರೀಯ ಹೆದ್ದಾರಿ-48  ಒಂದು ಲಕ್ಷ PCU ಗಿಂತ ಹೆಚ್ಚು ಟ್ರಾಫಿಕ್ ಸಾಂದ್ರತೆಯನ್ನು ಪೂರೈಸುತ್ತಿದೆ. ರಾಷ್ಟ್ರೀಯ ಹೆದ್ದಾರಿ-150 ಎ ಕೂಡ 20000 PCU ಗಿಂತ ಹೆಚ್ಚಿನ ಟ್ರಾಫಿಕ್ ಸಾಂದ್ರತೆಯನ್ನು ಪೂರೈಸುತ್ತಿದೆಯಲ್ಲದೇ ಈ ಹೆದ್ದಾರಿ ಹಾಸನದಿಂದ ತೆಲಂಗಾಣದಿಂದ ಜಡ್ಚೆರ್ಲಾವನ್ನು ಸಂಪರ್ಕಿಸುವ ಭಾರತ್ ಮಾಲಾ ಪರಿಯೋಜನೆಯ ಭಾಗವಾಗಿದೆ.

Advertisement

NH-150  ತೈಲ ನಗರ ಚಳ್ಳಕೆರೆಯನ್ನು ಸಂಪರ್ಕಿಸುತ್ತದೆ, ಮುಂಬೈ ನಂತರ ಚಳ್ಳಕೆರೆ ಅತಿ ದೊಡ್ಡ ಖಾದ್ಯ ತೈಲ ಉತ್ಪಾದಕ/ಪೂರೈಕೆದಾರ ನಗರ ಎಂದು ಪ್ರಸಿದ್ದಿಯಾಗಿದೆ, ಹಾಗೂ ಚಳ್ಳಕೆರೆ ಈಗ ರಕ್ಷಣ ಇಲಾಖೆಯ ಹಲವಾರು ಕೇಂದ್ರಗಳನ್ನು ಹೊಂದುವ ಮೂಲಕ ದೇಶದ ಗಮನ ಸೆಳೆದಿದೆ.  ಈಗ ಹಿರಿಯೂರು ನಗರದ ಬಳಿ ಈ ಎರಡೂ ಹೆದ್ದಾರಿಗಳು ಸೇರುವ ಕಡೆ  ಉದ್ದೇಶಿತ ಸೇತುವೆ ನಿರ್ಮಾಣ ಈಗಿರುವ ಟ್ರಾಫಿಕ್ ಸಾಂದ್ರತೆಯ ಅಗತ್ಯಗಳನ್ನು ಮತ್ತು ಅವಶ್ಯಕತೆಗಳನ್ನು ಪೂರೈಸಲು ಸಮರ್ಥವಾಗಿಲ್ಲ.

ಚಿತ್ರದುರ್ಗ ನಗರದ ಹೊರಹೊಲಯದಲ್ಲಿ ನಿರ್ಮಾಣ ಮಾಡಿರುವ ರೀತಿ ಕ್ಲೋವರ್‌ಲೀಫ್ ಜಂಕ್ಷನ್ ನಿರ್ಮಾಣ ಮಾಡಿದರೆ ಮಾತ್ರ ಉದ್ದೇಶ ಈಡೇರಲಿದೆ. ಆದ್ದರಿಂದ, ಕ್ಲೋವರ್ ಲೀಫ್ ಜಂಕ್ಷನ್ ನಿರ್ಮಾಣ ಮಾಡಲು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

2.ಚಳ್ಳಕೆರೆ ನಗರದ ಪರಿಮಿತಿಯಲ್ಲಿ ನಾಲ್ಕುಪಥದ ಹೆದ್ದಾರಿ ನಿರ್ಮಾಣ ಮಾಡುವುದು.

ಚಳ್ಳಕೆರೆ ನಗರ ಪರಿಮಿತಿಯಲ್ಲಿ ಈಗಾಗಲೇ (ಬಳ್ಳಾರಿ-ಹಿರಿಯೂರು ವಿಭಾಗ) ನಾಲ್ಕು ಪಥದ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಹಾಗೂ ಮುಕ್ತಾಯದ ಹಂತದಲ್ಲಿದೆ ಹಾಗೂ ಇದೇ ಯೋಜನೆಯಡಿ ಚಳ್ಳಕೆರೆ ಬೈಪಾಸ್ ಕಾಮಗಾರಿಯೂ ಮುಕ್ತಾಯ ಹಂತದಲ್ಲಿದೆ, ಚಳ್ಳಕೆರೆ ನಗರ ಪರಿಮಿಯಲ್ಲಿನ ಹೆದ್ದಾರಿಯು 2014 ರಲ್ಲಿ ಮೇಲ್ದರ್ಜೆಗೇರಿದಾಗಿನಿಂದ ಅಭಿವೃದ್ದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರ ಪರಿಮಿತಿಯಲ್ಲಿನ ಸುಮಾರು 8 ಕಿ.ಮೀ ಹೆದ್ದಾರಿಯನ್ನು ನಾಲ್ಕು ಪಥದ ಹೆದ್ದಾರಿಯನ್ನಾಗಿ One time improvement ಲೆಕ್ಕಶೀರ್ಷಿಕೆಯಡಿ ಅಭಿವೃದ್ದಿಪಡಿಸುವಂತೆ ಮನವಿ ಮಾಡಿದ್ದಾರೆ.

3.ಮೂಡಿಗೆರೆಯಿಂದ ಹೊಳಲ್ಕೆರೆಯವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಹೊಳಲ್ಕೆರೆಯಿಂದ-ಆನಗೋಡುವರೆಗೆ ವಿಸ್ತರಿಸಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡುವುದು.

ಪ್ರಸ್ತುತ 149 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಚಿಕ್ಕಮಗಳೂರಿನ ಮೂಡಿಗೆರೆಯಿಂದ ಕಡೂರು-ಹೊಸದುರ್ಗ ಮಾರ್ಗವಾಗಿ ಹೊಳಲ್ಕೆರೆವರೆಗೆ ವಿಸ್ತರಿಸಿದೆ. ಈ ಹೆದ್ದಾರಿಯಲ್ಲಿ ಹೊಳಲ್ಕೆರೆಯಿಂದ ಆನಗೋಡುವರೆಗಿನ 44.60 ಕಿಮೀ ಉದ್ದದ ಹೆದ್ದಾರಿಯನ್ನು ಮಿಸ್ಸಿಂಗ್ ಲಿಂಕ್ ಎಂದು ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ Economic Importance scheme  ನಡಿ ಘೋಷಣೆ ಮಾಡುವುದು.  ಈ ಮಾರ್ಗವು ರಾಷ್ಟ್ರೀಯ ಹೆದ್ದಾರಿ-48 ರಿಂದ ನೇರವಾಗಿ ರಾಷ್ಟ್ರೀಯ 7 ನೇ ಅತಿದೊಡ್ಡ ಬಂದರು ಮಂಗಳೂರು ನಗರವನ್ನು ಸೇರುತ್ತದೆ. ಈ ಹೆದ್ದಾರಿಯನ್ನು ಹೊಳಲ್ಕೆರೆಯಿಂದ ಆನಗೋಡು ವರೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ವಿಸ್ತರಣೆ ಮಾಡಿದರೆ ಹೊಳಲ್ಕೆರೆ ಸುತ್ತಮುತ್ತ ಲಭ್ಯವಾಗುವ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ಸಾಗಾಣಿಕೆಗೆ ಸಾಕಷ್ಟು ಅನುಕೂಲವಾಗಲಿದೆ ಎಂಬುದನ್ನು ಪತ್ರದಲ್ಲಿ ವಿವರಿಸಿದ್ದಾರೆ.

Tags :
Advertisement