ಟೀಂ ಇಂಡಿಯಾದ ಹೊಸ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಬಹುತೇಕ ಖಚಿತ
ಈಗಷ್ಟೇ ಐಪಿಎಲ್ ಮುಗಿದಿದೆ. ಅದರಲ್ಲಿ ಕೆಕೆಆರ್ ಗೆಲುವು ಸಾಧಿಸಿ ಕಪ್ ಗೆದ್ದಿದೆ. ಈಗ ಎಲ್ಕರ ಚಿತ್ತ ಟಿ20 ಕಡೆಗೆ ನೆಟ್ಟಿದೆ. ಅದರಲ್ಲೂ ರಾಹುಲ್ ದ್ರಾವಿಡ್ ಬಳಿಕ ಟೀಂ ಇಂಡಿಯಾಗೆ ಮುಂದಿನ ಕೋಚ್ ಯಾರಾಗ್ತಾರೆ ಎಂಬ ಕುತೂಹಲವಿತ್ತು. ಇದೀಗ ಬಿಸಿಸಿಐ ಬಿಗ್ ಸರ್ಪೈಸ್ ನೀಡಿದೆ. ಮತ್ತೆ ಕನ್ನಡಿಗನನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ.
ಸದ್ಯ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ತಂಡದ ಆಟಗಾರರು ತಯಾರಿಯಲ್ಲಿ ತೊಡಗಿದ್ದು, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಖಚಿತ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಟಿ20 ವಿಶ್ವಕಪ್ವರೆಗೆ ಇದೆ. ಬಳಿಕ ಟೀಮ್ ಇಂಡಿಯಾದ ಕೋಚ್ ಆಗಿ ಗಂಭೀರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಅವಧಿ ಮುಗಿಯುತ್ತಿದ್ದಂತೆ ಹೊಸ ಕೋಚ್ ಆಯ್ಕೆ ಮಾಡಲು ಬಿಸಿಸಿಐ ನಿರ್ಧಾರ ಮಾಡಿತ್ತು. ಅದರಂತೆ ಅರ್ಜಿ ಕೂಡ ಕರೆಯಲಾಗಿತ್ತು. ಒಂದಷ್ಟು ಷರತ್ತುಗಳು ಕೂಡ ಅದರಲ್ಲಿ ಇದ್ದವು. ಇದೀಗ ಗೌತಮ್ ಗಂಭೀರ್ ರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.