For the best experience, open
https://m.suddione.com
on your mobile browser.
Advertisement

ತುಂಗಾಭದ್ರಾ ಜಲಾಶಯದ ಗೇಟ್ ಚೈನ್ ಕಟ್ : ಡಿಕೆ ಶಿವಕುಮಾರ್ ಪರಿಶೀಲನೆ..!

07:30 PM Aug 11, 2024 IST | suddionenews
ತುಂಗಾಭದ್ರಾ ಜಲಾಶಯದ ಗೇಟ್ ಚೈನ್ ಕಟ್   ಡಿಕೆ ಶಿವಕುಮಾರ್ ಪರಿಶೀಲನೆ
Advertisement

Advertisement

ವಿಜಯನಗರ: ತುಂಗಾಭದ್ರಾ ಜಲಾಶಯದ 19ನೇ ಗೇಟಿನ ಚೈನ್ ಕಟ್ ಆಗಿತ್ತು. ಇದರಿಂದ 60 ಟಿಎಂಸಿ ನೀರು ಹೊರಗೆ ಹೋಗಿತ್ತು. ಈ ಘಟನೆಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೇಟ್ ಲಿಂಕ್ ಚೈನ್ ಕಟ್ ಆಗಿರುವ ಜಾಗಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದುರಸ್ತಿ ಕಾರ್ಯ ಮಾಡುವುದಕ್ಕೆ ಹಿಡಿಯುವ ಸಮಯದ ಬಗ್ಗೆಯೂ ಮಾಹಿತಿ ತಿಳಿದುಕೊಂಡರು.

Advertisement

ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಡ್ಯಾಂನ ನೀಲನಕ್ಷೆ ತೋರಿಸಿದ ಅಧಿಕಾರಿಗಳು ಇಂಚಿಂಚು ಮಾಹಿತಿಯನ್ನು ನೀಡಿದರು. ಡ್ಯಾಂ ಪರಿಶೀಲನೆ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇಲ್ಲಿನ ನೀರು ಕರ್ನಾಟಕ, ಆಂಧ್ರ, ತೆಲಂಗಾಣ ಜನತೆಯ ಜೀವನಾಡಿ ಇದು. 13 ಲಕ್ಷ ರೈತರಿಗೆ ನೀರು ಒದಗಿಸುವ ಜಲಾಶಯವಿದು. ಈ ರೀತಿಯ ಪರಿಸ್ಥಿತಿ ಕಂಡು ಬೇಸರವಾಗಿದೆ. ಇಂತಹ ಡ್ಯಾಂಗೆ ಗೇಟ್ ಚೈನ್ ಕಟ್ ಆಗಿದ್ದು ಆಶ್ಚತ್ಯಕರ ಸಂಗತಿ. ನಿನ್ನೆ ಮಧ್ಯರಾತ್ರಿ 10 ಗೇಟ್ ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ 19ನೇ ನಂಬರಿನ ಗೇಟ್ ಕಿಚ್ಚಿ ಹೋಗಿದೆ.

ಇದರಿಂದ ಡ್ಯಾಂಗೆ ಡ್ಯಾಮೇಜ್ ಆಗುವ ಸಾಧ್ಯತೆ ಇತ್ತು. ಆದರೆ ನಮ್ಮ ಅಧಿಕಾರುಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಎಲ್ಲಾ ಗೇಟ್ ಗಳನ್ನು ತೆಗೆದು ನೀರು ಬಿಟ್ಟಿದ್ದಾರೆ. ಈಗ ಗೇಟ್ ಕೊಚ್ಚಿ ಹೋಗಿರುವುದಕ್ಕೆ ನಾರಾಯಣ ಹಾಗೂ ಹಿಂದೂಸ್ತಾನಿ ಸ್ಟೀಲ್ ಕಂಪನಿಯನ್ನು ಸಂಪರ್ಕ‌ ಮಾಡಿದ್ದೇವೆ. ಗೇಟ್ ಮಾದರಿಯನ್ನು ತಯಾರಿಸಲು ಹೇಳಿದ್ದೇವೆ. ಮುರಿದು ಹೋಗಿರುವ ಗೇಟನ್ನು ಶೀಘ್ರವೇ ಸರಿ ಪಡಿಸುವ ಕೆಲಸವಾಗುತ್ತದೆ ಎಂದಿದ್ದಾರೆ.

Tags :
Advertisement