ರಾಜ್ಯಸಭಾ ಚುನಾವಣೆ ಬೆನ್ನಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ ಗಾಲಿ ಜನಾರ್ದನ ರೆಡ್ಡಿ : ಕುತೂಹಲದ ಭೇಟಿಯಲ್ಲಿ ಚರ್ಚೆಯಾಗಿದ್ದೇನು..?
ಬೆಂಗಳೂರು: ನಾಳೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ಅಡ್ಡಮತದಾನ ನಡೆಯುವ ಆತಂಕವೂ ಕಾಂಗ್ರೆಸ್ ಪಕ್ಷಕ್ಕೆ ಇದೆ. ಯಾಕಂದ್ರೆ ಕಡೆ ಗಳಿಗೆಯಲ್ಲಿ ಜೆಡಿಎಸ್ ಕಡೆಯಿಂದ ಐದನೇ ಅಭ್ಯರ್ಥಿಯೂ ಸ್ಪರ್ಧೆಗೆ ನಿಂತಿದ್ದಾರೆ. ಹೀಗಾಗಿ ಸಹಜವಾಗಿಯೇ ಮೂರು ಪಕ್ಷಗಳು ಸ್ವತಂತ್ರ ಶಾಸಕರ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಬಳಿಕ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯೂ ಶುರುವಾಗಿದೆ.
ಭೇಟಿ ಮಾಎಇದ ಬಳಿಕ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ ಅವರು, ಐತಿಹಾಸಿಕ ಆನೆಗುಂದಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಮಾರ್ಚ್ ತಿಂಗಳಲ್ಲಿ ಈ ವೈಭವ ನಡೆಯಲಿದೆ. ಹೀಗಾಗಿ ಈ ವೈಭವಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಆಹ್ವಾನಿಸಲು ಬಂದಿದ್ದೇ ಎಂದಿದ್ದಾರೆ.
ಇದೇ ವೇಳೆ ರಾಜ್ಯಸಭಾ ಚಿನಾವಣೆಯ ವಿಚಾರ ಚರ್ಚೆಗೆ ಬಂತ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಶಾಸಕ ಜನಾರ್ದನ ರೆಡ್ಡಿ, ರಾಜ್ಯಸಭಾ ಚುನಾವಣೆಗೆ ಎಲ್ಲರೂ ಮನವಿ ಮಾಡಿದ್ದಾರೆ. ಸಿಎಂ ಹಾಗೂ ಡಿಸಿಎಂ ಆದಿಯಾಗಿ ಎಲ್ಲಾ ಪಕ್ಷದವರು ಮನವಿ ಮಾಡಿದ್ದಾರೆ. ನಾನಿನ್ನೂ ತೀರ್ಮಾನ ಮಾಡಿಲ್ಲ ಎಂದಿದ್ದಾರೆ. ಐದು ಜನರು ರಾಜ್ಯಸಭೆಗೆ ಸ್ಪರ್ಧೆ ಹೊಡ್ಡಿರುವ ಕಾರಣ ಈ ಬಾರಿಯ ರಾಜ್ಯಸಭಾ ಚುನಾವಣೆಯೂ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸ್ವತಂತ್ರವಾಗಿ ಗೆದ್ದ ಶಾಸಕರಿಗೂ ಬೆಂಬಲ ನೀಡಲೂ ಮೂರು ಪಕ್ಷಗಳು ತೀರ್ಮಾನ ನಡೆಸಿವೆ.