ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೀಟ್, ಜೆಇಇ, ಸಿಇಟಿ ಉಚಿತ ಕೋಚಿಂಗ್..!
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಮುಗಿಸಿದ ಮೇಲೆ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಪರೀಕ್ಷೆಗಳನ್ನು ಬರೆಯಲು ಕೋಚಿಂಗ್ ಹೋಗಲೇಬೇಕಾಗಿದೆ. ಆದರೆ ಈ ಕೋಚಿಂಗ್ ಶುಲ್ಕವನ್ನು ಅದೆಷ್ಟೋ ವಿದ್ಯಾರ್ಥಿಗಳಿಂದ ಬರಿಸಲು ಸಾಧ್ಯವಿರುವುದಿಲ್ಲ. ಅಂಥಹ ಮಕ್ಕಳಿಗೂ ಒಳಿತಾಗುವಂತಹ ನಿರ್ಧಾರವನ್ನ ಸರ್ಕಾರ ತೆಗೆದುಕೊಂಡಿದೆ. NEET, JEE, CET ತರಬೇತಿಗಾಗಿ ಉಚಿತ ಕೋಚಿಂಗ್ ಕೊಡಲು ಸರ್ಕಾರ ಮುಂದಾಗಿದೆ.
ಇಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನ್ಲೈನ್ ಕೋಚಿಂಗ್ ತರಬೇತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಿದ್ದಾರೆ. ಇದು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿದ ಕೋರ್ಸ್ ಇದಾಗಿದೆ. ಈ ಮೂಲಕ ಸರ್ಕಾರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳಿಗೂ ಸುಲಭವಾಗಿ, ಉಚಿತವಾಗಿ ಮುಂದಿನ ಶಿಕ್ಷಣಕ್ಕೆ ಬೇಕಾದ ಕೋಚಿಂಗ್ ಸಿಗಲಿದೆ.
ಈ ಬಗ್ಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಇದು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗಿದೆ. ಇನ್ಮುಂದೆ ನೀಟ್, ಜೆಇಇ ಹಾಗೂ ಸಿಇಟಿ ಕುರಿತು ಉಚಿತ ಕೋಚಿಂಗ್ ನಡೆಸಲಾಗುತ್ತದೆ. ಇದನ್ನೂ ವಿದ್ಯಾರ್ಥಿಗಳ ಪಾಠ ಕೇಳಿ ಅಧ್ಯಯನ ನಡೆಸಬಹುದು. ಪದವಿ ಪೂರ್ವ ಕಾಲೇಜಿನ 20 ಸಾವಿರ ಹಾಗೂ ಆದರ್ಶ ಕಾಲೇಜಿನ ಐದು ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಇರುತ್ತದೆ. ಪರಿಣಿತ ಉಪನ್ಯಾಸಕರಿಂದ ಪ್ರತಿದಿನ ಈ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಸದುಪಯೋಗವಾಗಲಿದೆ. ಪೇಸ್ ಸಂಸ್ಥೆ ಮುಖಾಂತರ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ತರಬೇತಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದರು.