Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ಅಧ್ಯಯನ ಸಮಿತಿ ರಚಿಸಿ : ಸುದೀಪ್,‌ಚೇತನ್ ಸೇರಿ ಹಲವರಿಂದ ಪತ್ರ..!

06:37 PM Sep 04, 2024 IST | suddionenews
Advertisement

ಬೆಂಗಳೂರು: ಹೇಮಾ ವರದಿ ಇಡೀ ಮಲಯಾಳಂ ಚಿತ್ರರಂಗವನ್ನೇ‌ ನಡುಗಿಸಿದೆ. ಸಮಿತಿಯಲ್ಲಿದ್ದವರೆಲ್ಲ ಒಬ್ಬೊಬ್ಬರೆ ರಾಜೀನಾಮೆ ನೀಡುವಂತೆ ಮಾಡುತ್ತಿದೆ. ದೊಡ್ಡ ದೊಡ್ಡ ತಲೆಗಳ ತಲೆದಂಡವಾಗಿದೆ. ಇದೀಗ ಆ ರೀತಿಯ ಸಮಿತೊಯೊಂದರ ಬೇಡಿಕೆ ಸ್ಯಾಂಡಲ್ ವುಡ್ ನಲ್ಲೂ ಹೆಚ್ಚಾಗಿದೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಕೂಡ ಬರೆದಿದ್ದಾರೆ.

Advertisement

ಕನ್ನಡ ಚಿತ್ರರಂಗದ ಫೈರ್ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. FIRE ಅಂದ್ರೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಎಂಬ ಸಂಸ್ಥೆ. ಈ ಸಂಸ್ಥೆಯಲ್ಲಿ ನಟ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್ ಇದ್ದಾರೆ. ಇದೀಗ ಸಮಿತಿ ರಚನೆಗೆ ಈ ಸಂಸ್ಥೆ ಒತ್ತಾಯಿಸಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಮನವಿ ಮಾಡಿದೆ. ಈ ಅರ್ಜಿಗೆ ಫೈರ್‌ ಸಂಸ್ಥೆ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ನಟಿ ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ. ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ಸುದೀಪ್​ ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.

ಇನ್ನಿ ಫೈರ್ ಸಂಸ್ಥೆ ಪತ್ರದ ಮೂಲಕ ಮನವಿ‌ ಮಾಡಿರುವುದೇನೆಂದರೆ, ಕನ್ನಡ ಚಲನಚಿತ್ರೋದ್ಯಮದಲ್ಲೂ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಇದರ ಕುರಿತು ಅಧ್ಯಯನ ನಡೆಸಬೇಕು. ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಡಿಮ್ಯಾಂಡ್ ಇಟ್ಟಿದೆ.

Advertisement

Advertisement
Tags :
bengaluruChetanchitradurgaForm a committeeKannada film industry Sudeepstudy sexual harassmentsuddionesuddione newsಅಧ್ಯಯನ ಸಮಿತಿ ರಚಿಸಿಕನ್ನಡ ಚಿತ್ರರಂಗಚಿತ್ರದುರ್ಗ‌ಚೇತನ್ಬೆಂಗಳೂರುಲೈಂಗಿಕ ಕಿರುಕುಳಸುದೀಪ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article