For the best experience, open
https://m.suddione.com
on your mobile browser.
Advertisement

ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶ್ರೇಯಸ್ ಅಯ್ಯರ್ ಅಪರೂಪದ ದಾಖಲೆ...!

08:58 PM May 26, 2024 IST | suddionenews
ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶ್ರೇಯಸ್ ಅಯ್ಯರ್ ಅಪರೂಪದ ದಾಖಲೆ
Advertisement

ಸುದ್ದಿಒನ್ : ಐಪಿಎಲ್ 2024 ರ ಫೈನಲ್ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

Advertisement

ಐಪಿಎಲ್ 2024 ರ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಐಪಿಎಲ್ ಫೈನಲ್‌ನಲ್ಲಿ ಎರಡು ವಿಭಿನ್ನ ತಂಡಗಳಿಗೆ ನಾಯಕತ್ವ ವಹಿಸಿದ ಮೊದಲ ನಾಯಕರೆನಿಸಿಕೊಂಡರು. 2020ರ ಐಪಿಎಲ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ 2024ರ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತಾ ತಂಡದ ನಾಯಕತ್ವ ವಹಿಸಿದ್ದಾರೆ.

Advertisement

2020 ರ ಆವೃತ್ತಿಯ ಫೈನಲ್‌ನಲ್ಲಿ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಅಯ್ಯರ್ 50 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದ್ದರು. ಆದರೆ ಅಂದು ಅಯ್ಯರ್ ಅವರ ಹೋರಾಟ ವ್ಯರ್ಥವಾಗಿತ್ತು. ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದು ಕಪ್ ಎತ್ತಿ ಹಿಡಿದಿತ್ತು. ಅದರ ನಂತರ, ದೆಹಲಿಯಿಂದ ಕೋಲ್ಕತ್ತಾಗೆ ಸ್ಥಳಾಂತರಗೊಂಡ ಶ್ರೇಯಸ್ ಅಯ್ಯರ್, 2024 ರ ಆವೃತ್ತಿಯಲ್ಲಿ ಕೋಲ್ಕತ್ತಾವನ್ನು ಫೈನಲ್ಗೆ ತಲುಪಿಸಿದರು. ಲೀಗ್ ಹಂತದಲ್ಲಿ ಅಜೇಯ ಪ್ರದರ್ಶನ ನೀಡಿ ಫೈನಲ್ ತಲುಪಿದ್ದ ಕೋಲ್ಕತ್ತಾ ಅಂತಿಮ ಕದನದಲ್ಲಿ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ.

Advertisement

2024 ರ ಐಪಿಎಲ್ ಫೈನಲ್‌ಗೆ ಬಂದಾಗ, ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಸಮದ್ ಬದಲಿಗೆ ಶಹಬಾಜ್ ಅಹ್ಮದ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಹಬಾಜ್ ಅಹ್ಮದ್ ಅವರ ಕೊನೆಯ ಪಂದ್ಯದ ಪ್ರದರ್ಶನದ ಆಧಾರದ ಮೇಲೆ ಸ್ಥಾನ ಪಡೆದರು. ಆದರೆ, ಟಾಸ್ ಗೆದ್ದ ಹೈದರಾಬಾದ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಮೊದಲ ಓವರ್‌ನಲ್ಲಿ ಅಭಿಷೇಕ್ ವರ್ಮಾ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸ್ಟಾರ್ಕ್ ಎಸೆತಕ್ಕೆ ಅಭಿಷೇಕ್ ವರ್ಮಾ ಪೆವಿಲಿಯನ್‌ಗೆ ತೆರಳಿದರು.

Advertisement
Advertisement

ಎರಡನೇ ಓವರ್‌ನಲ್ಲಿ ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ಕೂಡ ಹಿಂತಿರುಗಿದರು. ವೈಭವ್ ಅರೋರಾ ಬೌಲಿಂಗ್ ನಲ್ಲಿ ಟ್ರಾವಿಸ್ ಹೆಡ್ ಕೀಪರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಐದನೇ ಓವರ್ ನಲ್ಲಿ ರಾಹುಲ್ ತ್ರಿಪಾಠಿ ಕೂಡ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಔಟಾದರು. 15 ನೇ ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು ‌90 ರನ್ ಗಳಿಸಿ ಎಸ್‌ಆರ್‌ಎಚ್‌ ಸಂಕಷ್ಟದಲ್ಲಿದೆ.

Advertisement
Tags :
Advertisement