Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೆಚ್ಚುತ್ತಿದೆ ಫ್ಲೂ ಸೋಂಕು : ಜನರು ಮುನ್ನೆಚ್ಚರಿಕೆ ಹೇಗೆ ವಹಿಸಬೇಕು..?

03:22 PM Nov 27, 2024 IST | suddionenews
Advertisement

ಬೆಂಗಳೂರು: ಇತ್ತೀಚೆಗೆ ವಾತಾವರಣದಲ್ಲಿ ವಿಚಿತ್ರವಾದ ಬದಲಾವಣೆಯಾಗುತ್ತಿದೆ. ಜೋರು ಬಿಸಿಲು ಬರುತ್ತೆ ಎನ್ನುವಾಗಲೇ ಮಳೆ ಬರುತ್ತದೆ. ಈಗ ಚಳಿಗಾಲ ಶುರುವಾಗಿದೆ ಎನ್ನುವಾಗಲೇ ಬಂಗಾಳ ಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದ ರಾಜ್ಯದಲ್ಲಿಯೂ ಮಳೆಯ ವಾತಾವರಣ ಸೃಷ್ಟಿಯಾಗಿದೆ. ಅಲ್ಲಲ್ಲಿ ಮಳೆಯೂ ಬಂದಿದೆ. ಚಳಿಯ ಜೊತೆಗೆ ಮಳೆಯ ವಾತಾವರಣ ಸೇರಿ ಮತ್ತಷ್ಟು ಮೈ ನಡುಕ ಉಂಟು ಮಾಡಿದೆ. ಈ ರೀತಿಯ ವಾತಾವರಣದಿಂದ ನಾನಾ ಆರೋಗ್ಯ ಸಮಸ್ಯೆಗಳು ಕಾಡುವುದಕ್ಕೆ ಶುರು ಮಾಡಿದೆ.

Advertisement

ಅದರಲ್ಲೂ ಬೆಂಗಳೂರಿನಲ್ಲಿ ವೈರಲ್ ಜ್ವರ, ಫ್ಲೂ ಸೋಂಕು ಪ್ರಕರಣ ಗಣನೀಯವಾಗಿ ಏರಿಕೆಯಾಗುತ್ತಿದೆ. ನಗರದ ಆಸ್ಪತ್ರೆಗಳಲ್ಲಿ ಜ್ವರ, ಉಸಿರಾಟದ ಸೋಂಕು ಇನ್ ಪ್ಲುಯೆಂಜಾ ಚಿಕಿತ್ಸೆಗೆ ಬರುವವರ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಫ್ಲೂ ಸೋಂಕು ಹಾಗೂ ಉಸಿರಾಟದ ಸಮಸ್ಯೆಯೇ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಾಂಕ್ರಾಮಿಕ ರೋಗ ತಡೆಯಲು ಜನರೇ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಹೊರಗೆ ಹೋಗುವಾಗ ಆದಷ್ಟು ಮಾಸ್ಕ್ ಗಳನ್ನು ಧರಿಸುವುದು ಉತ್ತಮವಾಗಿದೆ. ಅದರಲ್ಲೂ ಅಸ್ತಮಾ, ಅಲರ್ಜಿ ಇರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಚಳಿಯ ವಾತಾವರಣದಿಂದ ವೈರಲ್ ಸೋಂಕು ಪ್ರಕರಣಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅಸ್ತಮಾ ಇರುವವರಿಗೆ ಇದು ತೀವ್ರವಾಗಿ ಬಾಧಿಸಲಿದೆ. ಹೀಗಾಗಿ ಅಂಥವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳಿಗೂ ಈ ವೈರಸ್ ಬಾಧಿಸಲಿದೆ. ಹೀಗಾಗಿ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡಿ. ಕಳಪೆ ಗಾಳಿ, ಕಿಕ್ಕಿರಿದ ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಿ. ಅಗಾಗ್ಗೆ ಬಿಸಿ ನೀರು ಕುಡಿಯಿರಿ. ರೋಗಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅನಾರೋಗ್ಯ ಇದ್ದಾಗ ಆದಷ್ಟು ಜನಸಂದಣಿಯಿಂದ ದೂರವಿರಿ.

Advertisement

Advertisement
Tags :
bengaluruchitradurgasuddionesuddione newsಚಿತ್ರದುರ್ಗಫ್ಲೂ ಸೋಂಕುಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article