For the best experience, open
https://m.suddione.com
on your mobile browser.
Advertisement

ಪಾಕ್ ಗೆ ಶಾಕ್ | ರಾವಿ ನದಿ ನೀರನ್ನು ನಿಲ್ಲಿಸಿದ ಭಾರತ

05:59 AM Feb 26, 2024 IST | suddionenews
ಪಾಕ್ ಗೆ ಶಾಕ್   ರಾವಿ ನದಿ ನೀರನ್ನು ನಿಲ್ಲಿಸಿದ ಭಾರತ
Advertisement

ಸುದ್ದಿಒನ್ : ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಪರಿಣಾಮಕಾರಿಯಾಗಿ ಬಳಸಲು ಭಾರತ ಸಿದ್ಧವಾಗಿದೆ.

Advertisement
Advertisement

Advertisement

ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಶಹಪುರ್ ಕಂಡಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಭಾರತದಿಂದ ಪಾಕಿಸ್ತಾನಕ್ಕೆ ಹೋಗುತ್ತಿದ್ದ ರಾವಿ ನದಿ ನೀರನ್ನು ಕೇಂದ್ರ ಸರ್ಕಾರ ತಡೆದಿದೆ. ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿಯ 1150 ಕ್ಯೂಸೆಕ್ ನೀರನ್ನು ಈಗ ಜಮ್ಮು ಮತ್ತು ಕಾಶ್ಮೀರಕ್ಕೆ ತಿರುಗಿಸಲಾಗುತ್ತಿದೆ ಎಂದು ವರದಿಯಾಗಿದೆ. ಪಾಕಿಸ್ತಾನಕ್ಕೆ ಹೋಗುವ ರಾವಿ ನದಿ ನೀರನ್ನು ತಿರುಗಿಸಿ ಕಥುವಾ ಮತ್ತು ಸಾಂಬಾ ಜಿಲ್ಲೆಗಳ 32 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ನೀರು ಒದಗಿಸಲಾಗುವುದು.

Advertisement
Advertisement

ಸರಕಾರಿ ಮೂಲಗಳ ಪ್ರಕಾರ ಶಹಾಪುರ ಕಂಡಿ ಬ್ಯಾರೇಜ್‌ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಶಹಾಪುರದಲ್ಲಿ ನೀರು ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ಜಲ ಒಪ್ಪಂದದ ಪ್ರಕಾರ, ಭಾರತವು ಈಗ ರಾವಿ ನದಿ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಹಳೆ ಲಖನ್‌ಪುರ ಅಣೆಕಟ್ಟಿನಿಂದ ಪಾಕಿಸ್ತಾನದ ಕಡೆಗೆ ಹರಿಯುತ್ತಿದ್ದ ನೀರನ್ನು ಈಗ ಅಲ್ಲಿನ ಜನರ ಅನುಕೂಲಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ಗೆ ತಿರುಗಿಸಲಾಗುತ್ತದೆ.

1995ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಶಹಪುರ ಕಂಡಿ ಬ್ಯಾರೇಜ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ಯೋಜನೆಯು ದಶಕಗಳಿಂದ ಪ್ರಾರಂಭವಾಗದೆ ನಿಂತಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮಧ್ಯಸ್ಥಿಕೆ ವಹಿಸುವವರೆಗೂ ಈ ಯೋಜನೆಯ ಕಾಮಗಾರಿ ನಡೆಯಲಿಲ್ಲ.

2018ರ ನಂತರ ಶಹಾಪುರ ಕಂಡಿ ಬ್ಯಾರೇಜ್ ಕಾಮಗಾರಿ ಪುನರಾರಂಭವಾಯಿತು. ರೂ. 3300 ಕೋಟಿ ವೆಚ್ಚದ ಈ ಶಹಪುರ ಕಂಡಿ ಯೋಜನೆ ಮೂಲಕ ಸಾಗುವಳಿ ನೀರಿನ ಜತೆಗೆ 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಹೊರತಾಗಿ ಈ ಪ್ರದೇಶವನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸಬಹುದು ಎಂಬ ಭರವಸೆ ಸ್ಥಳೀಯ ಸಮುದಾಯದಲ್ಲಿದೆ.

ಇತ್ತೀಚೆಗೆ, ಭಾರತವು ಸಿಂಧೂ ನದಿಯ ಮತ್ತೊಂದು ಉಪನದಿಯಾದ ಚೆನಾಬ್ ನದಿಯ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರದ ರಾಟಲ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ನಿರ್ಮಾಣವನ್ನು ವೇಗಗೊಳಿಸಲು ಚೆನಾಬ್ ನದಿಯ ನೀರನ್ನು ಕೂಡ ತಿರುಗಿಸಲಾಗಿದೆ. 1960 ರಲ್ಲಿ, ಅಂದಿನ ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ.. ಭಾರತದ ಪೂರ್ವಕ್ಕಿರುವ ನದಿಗಳಾದ ಬಿಯಾಸ್, ರವಿ ಮತ್ತು ಸಟ್ಲೆಜ್.. ಸಿಂಧೂ, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ಪಾಕಿಸ್ತಾನದ ಹಿಡಿತವಿದೆ.

Advertisement
Tags :
Advertisement