ಚುನಾವಣೆ ಹೊತ್ತಲ್ಲೇ ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರ ನೇಮಕ
ಬೆಂಗಳೂರು: ಲೋಕಸಭಾ ಚುನಾವಣೆಯ ಬಿಸಿ ದೇಶದಾದ್ಯಂತ ಜೋರಾಗಿದೆ. ಗೆಲುವಿನ ಕಡೆಗೆ ಸಾಗುವುದಕ್ಕೆ ಏನೆಲ್ಲಾ ಬೇಕೋ ಆ ಎಲ್ಲಾ ಪ್ಲ್ಯಾನ್ ಗಳನ್ನು ಮಾಡುತ್ತಿವೆ ರಾಜಕೀಯ ಪಕ್ಷಗಳು. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆ ಇದೆ. ಹೀಗಾಗಿ ಇಲ್ಲಿನ ಗೆಲುವು ಸಹ ರಾಷ್ಟ್ರೀಯ ಪಕ್ಷಗಳಿಗೆ ಬಹಳ ಮುಖ್ಯವಾಗಿದೆ. ಚುನಾವಣೆಯ ಕಾವಿನ ನಡುವೆಯೇ ಕಾಂಗ್ರೆಸ್ ಭರ್ಜರಿ ಸರ್ಜರಿ ನಡೆಸಿದೆ. ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ.
ತನ್ವೀರ್ ಸೇಠ್, ಜಿ ಸಿ ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿಗೆ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಎಫರ್ಟ್ ಹಾಕುವ ಪ್ಲ್ಯಾನ್ ಹಾಕಿಕೊಂಡಿದೆ.
ಹಾಗಾದ್ರೆ ಐದು ಜನರಿಗೆ ಕೆಪಿಸಿಸಿಯಲ್ಲಿ ವಹಿಸಿರುವ ಹುದ್ದೆ ಯಾವುದು ಎಂಬುದನ್ನು ನೋಡುವುದಾದರೆ:
* ನೂತನ ಕಾರ್ಯಾಧ್ಯಕ್ಷರಾಗಿ : ತನ್ವೀರ್ ಸೇಠ್, ಜಿ ಸಿ ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್
* ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ ನೇಮಕ
* ಪ್ರಚಾರ ಸಮಿತಿ ಕೋ ಚೇರ್ಮನ್ ಆಗಿ ಎಲ್ ಹನುಮಂತಯ್ಯ ನೇಮಕ
* ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ರಿಜ್ವಾನ್ ಹರ್ಷದ್ ಅವರನ್ನು ನೇಮಕ ಮಾಡಲಾಗಿದೆ.