For the best experience, open
https://m.suddione.com
on your mobile browser.
Advertisement

ಮೈತ್ರಿ ಮಾತುಕತೆಗೆ ಫೈನಲ್ ಟಚ್ : ದಳಪತಿಗಳು ಡಿಮ್ಯಾಂಡ್ ಇಟ್ಟ ಆರು ಕ್ಷೇತ್ರಗಳು ಯಾವುವು..?

02:14 PM Oct 31, 2023 IST | suddionenews
ಮೈತ್ರಿ ಮಾತುಕತೆಗೆ ಫೈನಲ್ ಟಚ್   ದಳಪತಿಗಳು ಡಿಮ್ಯಾಂಡ್ ಇಟ್ಟ ಆರು ಕ್ಷೇತ್ರಗಳು ಯಾವುವು
Advertisement

ಬೆಂಗಳೂರು : ಮುಂದಿನ ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗುತ್ತಿದೆ. ಈಗಾಗಲೇ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ಸ್ಪಷ್ಟನೆ ನೀಡಲಾಗಿದೆ. ಆದರೆ ಅಧಿಕೃತವಾಗಿ ಯಾವುದೇ ಮಾತುಕತೆ ನಡೆಸಿರಲಿಲ್ಲ. ಇದೀಗ ಮೈತ್ರಿ ಮಾತುಕತೆಗೆ ಫೈನಲ್ ಮಾತುಕತೆಗೆ ಡೇಟ್ ಫಿಕ್ಸ್ ಆಗಿದೆ.

Advertisement
Advertisement

ನವೆಂಬರ್ 3 ರಂದು ಮೈತ್ರಿ ಮಾತುಕತೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ಈ ಭೇಟಿ ವೇಳೆಯೇ ಲೋಕಸಭಾ ಚುನಾವಣೆಯ ಮೈತ್ರಿಯ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದರ ಜೊತೆಗೆ ಮುಖ್ಯವಾಗಿ ಕ್ಷೇತ್ರ ಹಂಚಿಕೆಗಳ ವಿಚಾರವಾಗಿಯೂ ಮಾತನಾಡಲಿದ್ದಾರೆ. ಆದರೆ ಕೆಲವೊಂದು ಬೆಳವಣಿಗೆಗಳು ರಾಜ್ಯ ಬಿಜೆಪಿ ನಾಯಕರಿಗೇನೆ ವಿಷಯ ತಿಳಿದಿಲ್ಲ. ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟು, ಮೈತ್ರಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಜೆಡಿಎಸ್ ಒಟ್ಟು ಆರು ಕ್ಷೇತ್ರಗಳನ್ನು ಕೇಳುವ ಸಾಧ್ಯತೆ ಇದೆ. ಅದರಲ್ಲಿ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಕ್ಷೇತ್ರಗಳನ್ನು ಕೇಳುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎರಡು ಪಕ್ಷದಿಂದಾನೂ ಅಸಮಾಧಾನವಿದೆ. ಇದೇ ಅಸಮಾಧಾನದಿಂದಾನೇ ಈಗಾಗಲೇ ರಾಜ್ಯಾಧ್ಯಕ್ಷರಾಗಿದ್ದ ಇಬ್ರಾಹಿಂ ಹೊರಗೆ ಉಳಿದಿದ್ದಾರೆ.

Advertisement

Advertisement
Tags :
Advertisement