ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ದೂರು ದಾಖಲು : ನಿಯಮ ಮೀರಿದ್ರಾ ಆಯೋಜಕರು..?
ಬೆಂಗಳೂರು: ಕರಾವಳಿಯ ಪ್ರಮುಖ ಕ್ರೀಡೆ ಕಂಬಳ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗಿದೆ. ಕಂಬಳವನ್ನು ಬಹಳ ಹತ್ತಿರದಿಂದ ನೋಡಿ ಸಂತಸಗೊಂಡಿದ್ದಾರೆ. ಆದರೆ ಈ ಬೆನ್ನಲ್ಲೇ ಕರಾವಳಿ ಆಯೋಜಕರ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕುವಂತೆ ಇಲ್ಲ. ಅದಕ್ಕೆ ಬಿಬಿಎಂಪಿ ನಿಯಮ ಮಾಡಿದ್ದು, ದಂಡ ವಿಧಿಸಲಾಗುತ್ತದೆ. ಅನಿವಾರ್ಯತೆ ಎಂದಾಗ ಬಿಬಿಎಂಪಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಕಂಬಳ ಆಯೋಜಕರು ಅನುಮತಿಯನ್ನು ಪಡೆದಿಲ್ಲ, ಬೆಂಗಳೂರಿನೆಲ್ಲೆಡೆ ಎಲ್ಲೆಂದರಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ. ಹೀಗಾಗಿ ಕಂಬಳ ಆಯೋಕರ ವಿರುದ್ಧ ದೂರು ದಾಖಲಾಗಿದೆ.
ಬಿಬಿಎಂಪಿ ವಾರ್ಡ್ ನ ಕಂದಾಯ ನಿರೀಕ್ಷಕ ನೀಡಿದ ದೂರಿನ ಮೇರೆಗೆ ಕಂಬಳ ಆಯೋಜಕರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳವನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಹೀಗಾಗಿ ಕಂಬಳಕ್ಕೆ ಶುಭಾಶಯ ಕೋರುವ ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಬೆಂಗಳೂರು ನಗರದಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕುವುದಕ್ಕೆ ಅನುಮತಿ ಇಲ್ಲದ ಕಾರಣ, ದೂರು ದಾಖಲಿಸಲಾಗಿದೆ.