For the best experience, open
https://m.suddione.com
on your mobile browser.
Advertisement

ಬಿಜೆಪಿಯಿಂದ ಐದನೇ ಪಟ್ಟಿ ರಿಲೀಸ್ : ಚಿತ್ರದುರ್ಗ ಪೆಂಡಿಂಗ್ : ಅನಂತ್ ಕುಮಾರ್ ಹೆಗ್ಡೆಗೆ ಟಿಕೆಟ್ ಮಿಸ್ ಆಗಿದ್ದು ಯಾಕೆ..?

11:38 AM Mar 25, 2024 IST | suddionenews
ಬಿಜೆಪಿಯಿಂದ ಐದನೇ ಪಟ್ಟಿ ರಿಲೀಸ್   ಚಿತ್ರದುರ್ಗ ಪೆಂಡಿಂಗ್   ಅನಂತ್ ಕುಮಾರ್ ಹೆಗ್ಡೆಗೆ ಟಿಕೆಟ್ ಮಿಸ್ ಆಗಿದ್ದು ಯಾಕೆ
Advertisement

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯವನ್ನು ಈಗಾಗಲೇ ರಾಜಕೀಯ ಪಕ್ಷಗಳು ಆರಂಭಿಸಿವೆ. ಇದರ ಜೊತೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುತ್ತಲೆ ಇದೆ. ಬಿಜೆಪಿ ಇಂದು ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಗದೀಶ್ ಶೆಟ್ಟರ್ ಗೆ ಅಂದುಕೊಂಡಂತೆ ಟಿಕೆಟ್ ನೀಡಿದೆ. ಉಳಿದಂತೆ ಚಿತ್ರದುರ್ಗವನ್ನು ಅದ್ಯಾಕೋ ಪೆಂಡಿಂಗ್ ನಲ್ಲಿಯೇ ಇಟ್ಟಿದೆ.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಶೆಟ್ಟರ್, ಅಲ್ಲಿಯೂ ಸೋತಿದ್ದರು. ಮತ್ತೆ ಬಿಜೆಪಿಯ ಹೈಕಮಾಂಡ್ ಮಾತಿಗೆ ಕಟ್ಟು ಬಿದ್ದು ಬಿಜೆಪಿ ವಾಪಾಸ್ ಆದರು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆಯನ್ನು ನೀಡಿ, ಶೆಟ್ಟರ್ ಅವರನ್ನು ವಾಪಾಸ್ ಕರೆತರಲಾಗಿತ್ತು. ಅದರಂತೆ ಇದೀಗ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಕ್ಕ ಖುಷಿಯಲ್ಲಿ ಶೆಟ್ಟರ್, ಟಿಕೆಟ್ ಕೊಡುವುದರ ಮೂಲಕ ಬೆಳಗಾವಿ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಮಾಡಲು ಒಂದು ಅವಕಾಶ ಕೊಟ್ಟಿದ್ದಾರೆ. ಪ್ರಧಾನಿ‌ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಬಿಎಸ್ವೈ ಹಾಗೂ ಪುತ್ರ ವಿಜಯೇಂದ್ರಗೂ ಧನ್ಯವಾದ ತಿಳಿಸಿದ್ದಾರೆ.

Advertisement

ಇನ್ನು ಈ ಬಾರಿ ಹಿಂದೂ ಫೈಯರ್ ಬ್ರಾಂಡ್ ಅಂತಾನೇ ಗುರುತಿಸಿಕೊಂಡಿರುವ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡದೆ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಲಾಗಿದೆ. ಅನಂತ್ ಕುಮಾರ್ ಹೆಗಡೆ ಅವರ ಸಾಲು ಸಾಲು ತಪ್ಪುಗಳೇ ಅವರಿಗೆ ಟಿಕೆಟ್ ಮಿಸ್ ಆಗಲು ಕಾರಣ ಎನ್ನಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್ ಅವರಿಗೆ ಟಿಕೆಟ್ ನೀಡಿದೆ.

Tags :
Advertisement