For the best experience, open
https://m.suddione.com
on your mobile browser.
Advertisement

24 ವರ್ಷದ ಬಳಿಕ ತಂದೆ ನೋಡಿದ್ದು.. ಚುನಾವಣೆ ಬಂದಾಗ ಮಾತ್ರ ಆದರ್ಶ ಮಗಳು : ಯೋಗೀಶ್ವರ್ ವಿರುದ್ಧ ನಿಶಾ ಆಕ್ರೋಶ..!

04:05 PM May 22, 2024 IST | suddionenews
24 ವರ್ಷದ ಬಳಿಕ ತಂದೆ ನೋಡಿದ್ದು   ಚುನಾವಣೆ ಬಂದಾಗ ಮಾತ್ರ ಆದರ್ಶ ಮಗಳು   ಯೋಗೀಶ್ವರ್ ವಿರುದ್ಧ ನಿಶಾ ಆಕ್ರೋಶ
Advertisement

ಬೆಂಗಳೂರು: ಯಾರಿಗೆ ಯಾವ ಸಮಸ್ಯೆ ಇರುತ್ತೆ ಎಂಬುದನ್ನು ಊಹಿಸುವುದಕ್ಕೆ ಆಗಲ್ಲ. ಇತ್ತಿಚೆಗಷ್ಟೇ ನಿಶಾ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರ ತಂದೆ ಬಿಜೆಪಿಯಲ್ಲಿದ್ದಾರೆ. ಸಿ.ಪಿ. ಯೋಗೀಶ್ವರ್ ಮಗಳು ಈ ರೀತಿ ಮಾಡಬಾರದು. ಕಾಂಗ್ರೆಸ್ ಪಕ್ಷ ಸೇರಬಾರದಿತ್ತು ಎಂದೇ ಚರ್ಚೆಯಾಗಿತ್ತು. ಆದರೆ ತಮ್ಮ ಮತ್ತು ತಂದೆಯ ನಡುವಿನ ಬಾಂಧವ್ಯ ಹೇಗಿದೆ..? ಅವರು ಎಷ್ಟು ದೂರ ಇದ್ದಾರೆ ಎಂಬುದನ್ನು ವಿಡಿಯೋ ಮಾಡುವ ಮೂಲಕ ಅನಾವರಣ ಮಾಡಿದ್ದಾರೆ.

Advertisement

ನಿಶಾ ಹಿಂದೆ ಇರುವ ಯೋಗೀಶ್ವರ್ ಹೆಸರನ್ನು ತೆಗೆದುಬಿಡಿ ಎಂದೇ ಹಲವರು ಕಮೆಂಟ್ ಹಾಕಿದ್ದರು. ಆ ಕಮೆಂಟ್ ಗೆ ಉತ್ತರಿಸಿರುವ ನಿಶಾ ಯೋಗೀಶ್ವರ್, ನನಗೆ ಹತ್ತು ವರ್ಷ ಇದ್ದಾಗಲೇ ನಮ್ಮ ತಂದೆ‌ ನನ್ನಿಂದ ದೂರ ಹೋದರು. ಚುನಾವಣಾ ಸಮಯದಲ್ಲಿ ನನ್ನನ್ನು ಕರೆಯುತ್ತಿದ್ದೆರು. ಆಗ ನಮ್ಮ ತಂದೆಯ ಪರ ಪ್ರಚಾರಕ್ಕೆ ಹೋಗುತ್ತಿದ್ದೆ. 24 ವರ್ಷದ ನಂತರ ನಾನು ಅವರನ್ನು ನೋಡುತ್ತಿದ್ದೇನೆ. ಚುನಾವಣೆ ಸಮಯದಲ್ಲಿ ಮನೆ ಮನೆಗೆ ತೆರಳಿ ತಂದೆ ಅವರ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ. ಆಗ ನಾನು ಸಿ.ಪಿ.ಯೋಗೀಶ್ವರ್ ಅವರ ಆದರ್ಶ ಮಗಳಾಗಿದ್ದೆ.

ಈಗ ನಾನು ನನ್ನ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಅವರಿಗೆ ಆದರ್ಶ ಮಗಳಲ್ಲ. ತಂದೆ ಹೆಸರು ತೆಗೆದು ಬಿಡಿ ಎಂದು ಕಮೆಂಟ್ ಮಾಡಿರುವುದು ಯಾರು ಎಂದು ನನಗೆ ಗೊತ್ತು. ಕಮೆಂಟ್ ಮಾಡಿದವರೆಲ್ಲ ಉತ್ತರಿಸಿ. ತಂದೆ ಹೆಸರನ್ನು ತೆಗೆಯುವುದು ಹೇಗೆ. ಆಧಾರ್ ಕಾರ್ಡ್, ಪಾಸ್ ಪೋರ್ಟ್ ನಲ್ಲೂ ಹೆಸರು ಬದಲಿಸಬೇಕು. ಹೆಸರು ತೆಗೆದ ಮಾತ್ರಕ್ಕೆ ಸಿ.ಪಿ ಯೋಗೀಶ್ವರ್ ನನ್ನ ತಂದೆ ಅಲ್ಲ ಅನ್ನುವುದಕ್ಕೆ ಆಗುತ್ತಾ. ಭಗವಂತನ ಇಚ್ಛೆಯಿಂದ ನಾನು ಅವರ ಮಗಳಾಗಿ ಹುಟ್ಟಿದ್ದೇನೆ. ಕಳೆದ 20 ವರ್ಷದಿಂದ ನಮ್ಮ ಚಿಕ್ಕಮ್ಮನ ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸ್ವಂತ ಮಗಳಾದ ನಾನು ಅವರ ಜೊತೆ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.

Advertisement

Advertisement
Advertisement
Tags :
Advertisement