ಅಪ್ಪ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಸೋಲಿಸಬೇಕೆಂದರೆ, ಮಗಳು ಕಾಂಗ್ರೆಸ್ ಸೇರಿ ಗೆಲ್ಲಿಸಬೇಕೆನ್ನುತ್ತಿದ್ದಾರೆ : ಸಿಪಿ ಯೋಗೀಶ್ವರ್ ಮಗಳ ನಡೆ ಏನು..?
ರಾಮನಗರ: ಸಿಪಿ ಯೋಗೀಶ್ವರ್ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಸೋಲಿಸಬೇಕೆಂದು ಪಣ ತೊಟ್ಟಿದ್ದಾರೆ. ಅದರಲ್ಲು ತನ್ನ ಶತ್ರು ಎಂದೇ ಭಾವಿಸಿದ್ದ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೆ ತಡ, ಅವರನ್ನು ಭೇಟಿ ಮಾಡಿ, ಬೆಂಗಳೂರು ಗ್ರಾಮಾಂತರದ ಬಗ್ಗೆ ಚರ್ಚೆ ನಡೆಸಿದ್ದರು. ಇದೀಗ ಸಿಪಿ ಯೋಗೀಶ್ವರ್ ಪುತ್ರಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ನಿಶಾ ಯೋಗೀಶ್ವರ್ ಪ್ರತಿಕ್ರಿಯೆ ನೀಡಿದ್ದು, 'ನಾನು ಕಾಂಗ್ರೆಸ್ ಸೇರುವುದು ನನ್ನ ಕುಟುಂಬದವರಿಗಿಂತ ನನ್ನ ವೈಯಕ್ತಿಕ ನಿಲುವು. ಈ ಹಿಂದೆ ಕಾಂಗ್ರೆಸ್ ಸೇರುವುದಕ್ಕಾಗಿಯೇ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿದ್ದೆ. ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೇರ್ಪಡೆಯಾದರೆ ಮಾತ್ರ ಡಿಕೆ ಸುರೇಶ್ ಪರ ಮತಯಾಚನೆ ಮಾಡುತ್ತೀನಿ. ಲೋಕಸಭಾ ಚುನಾವಣೆಯ ನಂತರ ಸೇರ್ಪಡೆಗೊಳ್ಳುವುದಾದರೇ ಮತಯಾಚನೆ ಮಾಡುವುದಿಲ್ಲ.
ನಾನು ಚಿಕ್ಕವಯಸ್ಸಿನಿಂದಲೂ ಚನ್ನಪಟ್ಟಣದಲ್ಲಿ ಬೆಳೆದ ಮಗಳು. ಚನ್ನಪಟ್ಟಣದ ಜನರು ನನ್ನ ಕುಟುಂಬವಿದ್ದಂತೆ. ನಾನು ಕಾಂಗ್ರೆಸ್ ಸೇರುವುದು ನನ್ನ ನಿರ್ಧಾರವೇ ವಿನಃ ಕುಟುಂಬದವರ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪೈಪೋಟಿ ನಡುವೆ ರಾಮನಗರ, ಅಪ್ಪ-ಮಗಳ ಪ್ರಚಾರದ ಪೈಪೋಟಿಗೂ ಸಾಕ್ಷಿಯಾಗುತ್ತ ಅಂತ ಕಾದು ನೋಡಬೇಕಿದೆ.