Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬರ, ಬೆಳೆ ನಾಶದಿಂದ ಕಂಗೆಟ್ಟ ರೈತರ ಕಣ್ಣಲ್ಲಿ ನೀರು ತರಿಸಬಾರದು : ಕುಮಾರಸ್ವಾಮಿ ಆಕ್ರೋಶ

12:48 PM May 16, 2024 IST | suddionenews
Advertisement

ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೂ, ಕೆಲವು ಬ್ಯಾಂಕ್ ಗಳು ಅದನ್ನ ಸಾಲದ ಮೊತ್ತಕ್ಕೆ ವಜಾ ಮಾಡಿಕೊಳ್ಳುತ್ತಿವೆ. ಯಾದಗಿರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಬೆಳವಣಿಗೆ ರೈತರಿಗೂ ಆತಂಕ ತಂದೊಡ್ಡಿದೆ. ಬೆಳೆನಾಶದ ನಷ್ಟದಲ್ಲಿದ್ದವರಿಗೆ ಇದು ಕಣ್ಣೀರಾಗಿಸಿದೆ. ಮಾಹಿತಿಯನ್ನು ನೀಡದೆ, ಮೊದಲು ರೈತರ ಖಾತೆಗೆ ಹಣವನ್ನು ಹಾಕದೆ ನೇರವಾಗಿ ಬ್ಯಾಂಕ್ ನ ಸಾಲದ ಮೊತ್ತಕ್ಕೆ ಹಾಕಿಕೊಂಡಿದ್ದಾರೆ. ಈ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರ ಹಾಗೂ ಬ್ಯಾಂಕ್ ನಡವಳಿಕೆಗಳ ಮೇಲೆ ಗರಂ ಆಗಿದ್ದಾರೆ.

Advertisement

ಈ ಸಂಬಂಧ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದು, ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಹೆಸರಿಗೆ ಅನ್ನದಾತ.., ಆದರೆ; ಅವರ ಕಣ್ಣೀರು ಒರೆಸಿ ಅವರಿಗೆ ಧಾತನಾಗಿ ನಿಲ್ಲಬೇಕಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಕೈಕಟ್ಟಿ ಕೂತಿದೆ.

 

Advertisement

ಕೇಂದ್ರ ಸರಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಗಳ ವರ್ತನೆ ನಿಜಕ್ಕೂ ಕ್ರೂರಾತಿ ಕ್ರೂರ, ಖಂಡನೀಯ. ಮೊದಲೇ ತೀವ್ರ ಬರ, ಬೆಳೆನಾಶದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಇದು ಎಂದರೆ ತಪ್ಪಲ್ಲ.

ರಾಜ್ಯ ಸರಕಾರ ಕೂಡಲೇ ಸಾಲ ನೀಡಿರುವ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕು. ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡಬೇಕು ಎನ್ನುವುದು ನನ್ನ ಆಗ್ರಹ ಎಂದಿದ್ದಾರೆ.

Advertisement
Tags :
bring tears to their eyescrop destructiondistressed by droughtFarmersH D KumaraswamyKumaraswamy outragedಕಂಗೆಟ್ಟ ರೈತರುಕುಮಾರಸ್ವಾಮಿ ಆಕ್ರೋಶಬರಬೆಳೆ ನಾಶ
Advertisement
Next Article