For the best experience, open
https://m.suddione.com
on your mobile browser.
Advertisement

ಮೂರು ರಾಜ್ಯಗಳ ರೈತರು ಖುಷಿ ಪಡೋ ಸುದ್ದಿ : ಮತ್ತೆ ಭರ್ತಿಯಾಯ್ತು ತುಂಗಾ ಭದ್ರಾ ನದಿ

08:59 PM Sep 04, 2024 IST | suddionenews
ಮೂರು ರಾಜ್ಯಗಳ ರೈತರು ಖುಷಿ ಪಡೋ ಸುದ್ದಿ   ಮತ್ತೆ ಭರ್ತಿಯಾಯ್ತು ತುಂಗಾ ಭದ್ರಾ ನದಿ
Advertisement

Advertisement
Advertisement

ಬಳ್ಳಾರಿ: ಗೇಟ್ ಮುರಿದು ಬಿದ್ದು ತುಂಗಾ ಭದ್ರಾ ನದಿಯಲ್ಲಿದ್ದ ನೀರು ಅನಿವಾರ್ಯವಾಗಿ ಹೊರಗೆ ಬಿಡಲೇಬೇಕಾಗಿತ್ತು. ತುಂಗಾಭದ್ರಾ ನದಿ ನೀರಿನಿಂದ ಮೂರು ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಗೇಟ್ ಸರಿಯಾದ ಮೇಲೆ ನೀರಿನ ಬಗ್ಗೆಯೇ ರೈತರಿಗೆ ಚಿಂತೆಯಾಗಿತ್ತು. ಇದೀಗ ಆ ಚಿಂತೆ ಕಳೆದಿದೆ, ನೀರು ಮತ್ತೆ ಭರ್ತಿಯಾಗಿದೆ.

Advertisement

ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದರೆ ತುಂಗಾಭದ್ರಾ ಡ್ಯಾಂ ತುಂಬುವ ನಿರೀಕ್ಷೆ ಇತ್ತು. ಅದರಂತೆ ಗೇಟ್ ರಿಪೇರಿ ಕಾರ್ಯದ ಬಳಿಕ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಿದೆ. ಹೀಗಾಗಿ ನಿರೀಕ್ಷೆಗೂ ಮೀರಿ ಬಹಳ ಬೇಗನೇ ತುಂಗಾಭದ್ರಾ ಡ್ಯಾಂ ಭರ್ತಿಯಾಗಿದೆ. ಇದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸಂತಸವೂ ಹೆಚ್ಚಾಗಿದೆ.

Advertisement

'ಎಲ್ಲರ ಪ್ರಾರ್ಥನೆಯಿಂದ, ವರುಣನ ಕೃಪೆಯಿಂದ ತುಂಗಾಭದ್ರಾ ಡ್ಯಾಂ ಮತ್ತೆ ತುಂಬಿದೆ. ಹೆಚ್ಚುವರಿ ನೀರನ್ನು ನದಿಗೆ ಕ್ರೈಸ್ಟ್ ಗೇಟ್ ಮುಖಾಂತರ ಬಿಡಲಾಗುವುದು' ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ತುಂಗಾ ಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ಜಾಸ್ತಿಯಾದಾಗಲೇ ಭರ್ತಿಯಾಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಗೇಟ್ ಕಿತ್ತುಕೊಂಡು ಬಿಟ್ಟಿತ್ತು. ದುರಸ್ತಿ ಕಾರ್ಯ ನಡೆಯುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನೀರು ತುಂಬುತ್ತೆ ಎಂಬ ಭರವಸೆಯನ್ನು ನೀಡಿದ್ದರು. ಇದೀಗ ಅದು ಸತ್ಯವಾಗಿದೆ. ತುಂಗಾಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ: 1631.92 ಅಡಿ ಇದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ : 105.788 ಟಿಎಂಸಿಯನ್ನು ಹೊಂದಿದೆ. ಕಳೆದ 24 ಗಂಟೆಯ ಒಳಹರಿವು ಸರಾಸರಿ : 39945 ಕ್ಯುಸೆಕ್ ಆಗಿದೆ. ಇನ್ನು ಕಳೆದ 24 ಗಂಟೆಯ ಹೊರ ಹರಿವು : 15235 ಕ್ಯುಸೆಕ್ ಆಗಿದೆ.

Tags :
Advertisement