For the best experience, open
https://m.suddione.com
on your mobile browser.
Advertisement

ಸಾಲ ಭಾದೆ ರೈತ ಆತ್ಮಹತ್ಯೆ

06:21 PM Nov 27, 2023 IST | suddionenews
ಸಾಲ ಭಾದೆ ರೈತ ಆತ್ಮಹತ್ಯೆ
Advertisement

ಬಳ್ಳಾರಿ, ಕುರುಗೋಡು : ಸಾಲ ಭಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಜರುಗಿದೆ.ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Advertisement

ಬಾದನಹಟ್ಟಿ ಗ್ರಾಮದ ಪೋತಪ್ಪನ ಕಟ್ಟೆ 4ನೇ ವಾರ್ಡಿನ ನಿವಾಸಿ ಬಸಾಪುರ ಪೆನ್ನಯ್ಯ ವಾಲ್ಮೀಕಿ ಸಮುದಾಯ (35) ವರ್ಷ ಮೃತ ದುರ್ದೈವಿ ಈತನಿಗೆ ಪತ್ನಿ ಸೇರಿ ಐದು ಜನ ಪುತ್ರಿಯರು ಹಾಗೂ ಒಬ್ಬ ಪುತ್ರನು ಇದ್ದಾನೆ.

ಬಸಾಪುರ ಪೆನ್ನಯ್ಯ ತನ್ನ 3 ಎಕರೆ ಜಮೀನು ನಲ್ಲಿ ಮೆಣಿಸಿನಕಾಯಿ ಬೆಳೆ ಬಿತ್ತನೆ ಮಾಡಿ ವ್ಯವಸಾಯ ಮಾಡಿಕೊಂಡು ಹೋಗುತಿದ್ದ, ಮಳೆ ಇಲ್ಲದೆ, ಬೆಳೆಗೆ ನೀರು ಸಿಗದೆ ಮೆಣಿಸಿನ ಕಾಯಿ ಸಸಿ ಒಣಗಿ ಹೋಗಿ ಬೆಳೆ ನಷ್ಟವಾಗಿದೆ. ಬೆಳೆಗೆ ಕ್ರಿಮಿನಾಶಕ ಔಷಧಿ, ರಸಗೊಬ್ಬರ, ಬೀಜ ಬಿತ್ತನೆಗೆ ಅಂತ ತನ್ನ ಪತ್ನಿ ನೀಲಮ್ಮ ಹೆಸರಲ್ಲಿ ಎಸ್. ಬಿ. ಐ ಬ್ಯಾಂಕ್ ನಲ್ಲಿ 1 ಲಕ್ಷದ 20 ಸಾವಿರ ಸಾಲವನ್ನು ತೆಗೆದುಕೊಂಡಿದ್ದಾನೆ. ಅಲ್ಲದೆ ಗ್ರಾಮದಲ್ಲಿ 5 ಲಕ್ಷ ಕೈ ಸಾಲ ಮಾಡಿದ್ದಾನೆ.ಮೆಣಿಸಿನಕಾಯಿ ಬೆಳೆ ಒಣಗಿ ಹೋದ ಹಿನ್ನಲೆ ಮತ್ತೆ ಜೋಳ ಹಾಕಿದ್ದಾನೆ.

Advertisement

ಮಳೆಯಿಲ್ಲದೇ ಮೆಣಿಸಿನಕಾಯಿ ಬೆಳೆ ಬಾರದೆ ನಷ್ಟ ಉಂಟಾಗಿದ್ದರಿಂದ ಸಾಲ ಹೆಚ್ಚಾಗಿ ತೀರಿಸುವುದು ಹೇಗೆ ಅಂತ ಚಿಂತೆಗೆ ಹಿಡಾಗಿ ಮನನೊಂದು ರಾತ್ರಿ ಕ್ರಿಮಿನಾಶಕ ಔಷಧಿ ಸೇವಿಸಿ ಒದ್ದಾಡುತ್ತಿದ್ದು,ಇದನ್ನು ಕಂಡ ಕುಟುಂಬಸ್ಥರು ಬಂದು ನೋಡಿದಾಗ ಬಾಯಲ್ಲಿ ಬಿಳಿ ನೊರೆ ಬರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದೋಯ್ಯಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತ ಪಟ್ಟಿದ್ದಾನೆ ಎಂದು ಪತ್ನಿ ನೀಡಿದ ದೂರಿನ ಅನ್ವಯ ಕುರುಗೋಡು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags :
Advertisement