For the best experience, open
https://m.suddione.com
on your mobile browser.
Advertisement

ದರ್ಶನ್ ಹೇಳಿದ ಮಾತಿಗೆ ಫಿದಾ ಆದ ಫ್ಯಾನ್ಸ್

08:29 PM Jan 02, 2024 IST | suddionenews
ದರ್ಶನ್ ಹೇಳಿದ ಮಾತಿಗೆ ಫಿದಾ ಆದ ಫ್ಯಾನ್ಸ್
Advertisement

Advertisement
Advertisement

ಕಾಟೇರ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಅಬ್ಬರಿಸುತ್ತಾ ಇದೆ. ರಿಲೀಸ್ ಆಗಿ ಐದು ದಿನಕ್ಕೆ ಬಾಕ್ಸ್ ಆಫೀಸ್ ನಡುಗುತ್ತಿದೆ. ಮೊದಲೇ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್.  ಅದರಲ್ಲೂ ತರುಣ್ ಸುಧೀರ್ ಕಾಂಬಿನೇಷನ್ ಬೇರೆ. ಸಿನಿಮಾದ ನಿರೀಕ್ಷೆಯನ್ನ ಕೇಳಬೇಕೆ. ಮೊದಲ ಎರಡು ದಿನ ಫ್ಯಾನ್ಸ್ ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಈ ಮೂರು ದಿನದಿಂದ ಸಿನಿಮಾ ಅಭಿಮಾನಿಗಳು ಟಿಕೆಟ್ ಗಾಗಿ ಕ್ಯೂ ನಿಂತಿದ್ದಾರೆ. ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ಮತ್ತೆ ಕ್ಲಿಕ್ ಆಗಿದೆ. ಈ ಸಕ್ಸಸ್ ಸಂತಸವನ್ನು ದರ್ಶನ್ ಅಂಡ್ ಟೀಂ ಎಲ್ಲರ ಜೊತೆಗೂ ಹಂಚಿಕೊಂಡಿದೆ. ಈ ವೇಳೆ ದರ್ಶನ್ ಆಡಿದಂತ ಒಂದೊಂದು ಮಾತು ಫ್ಯಾನ್ಸ್ ಗೆ ಸ್ಪೂರ್ತಿಯಾಗಿದೆ.

Advertisement

ದರ್ಶನ್, ತರುಣ್ ಸುಧೀರ್ ಬಗ್ಗೆಯೂ ಹೊಗಳಿದ್ದಾರೆ. ತರುಣ್ ಗೆ ನಂಗೆ ಏನು ಬೇಕು ಎಂಬುದು ಚೆನ್ನಾಗಿ ಗೊತ್ತು. ನಾನು ಯಾವ ಥರದ ಶರ್ಟ್ ಹಾಕಿದರೆ ಚೆನ್ನಾಗಿ ಕಾಣಿಸುತ್ತೀನಿ ಅನ್ನೋದು ಕೂಡ ಚೆನ್ನಾಗಿಯೇ ಗೊತ್ತು. ಎಲ್ಲಿ ಉದ್ದ ಬೇಕು, ಎಲ್ಲಿ ತುಂಡ ಬೇಕು ಎಂಬುದನ್ನು ಚೆನ್ನಾಗಿಯೇ ಅರಿತಿದ್ದಾರೆ ಎಂದಿದ್ದಾರೆ.

Advertisement

ಇದೇ ವೇಳೆ ಅಣ್ಣಾವ್ರನ್ನು ನೆನೆದಿದ್ದಾರೆ. ಕಾಟೇರ ಸಿನಿಮಾದಲ್ಲಿನ ಕಥೆ ಮತ್ತು ದರ್ಶನ್ ನಟನೆಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಡಾ.ರಾಜ್‌ಕುಮಾರ್ ಅವರನ್ನ ಹೋಲಿಸಿ ದರ್ಶನ್ ನಟನೆಯನ್ನು ಹೊಗಳಿದ್ದಾರೆ. ಹೀಗಾಗಿ ಡಾ.ರಾಜ್‌ಕುಮಾರ್ ಅವರ ಹೆಸರಲ್ಲ. ಅವರ ಕಾಲು ಧೂಳಿಗೂ ನಾವು ಸಮ ಅಲ್ಲ. ದಯವಿಟ್ಟು ಈ ವಿಚಾರವನ್ನು ಅಲ್ಲಿ ತನಕ ಎತ್ತುಕೊಂಡು ಹೋಗಲೇಬೇಡಿ. ನಾವು ಪ್ರಯತ್ನ ಮಾಡಬಹುದು. ಆದರೆ 000.1% ನಾವು ಅವರ ನಟನೆಗೆ ರೀಚ್ ಆಗೋಕೆ ಸಾಧ್ಯನೇ ಇಲ್ಲ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ.

Advertisement
Tags :
Advertisement