Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸುಲಿಗೆ ಪ್ರಕರಣ: ಹೆಚ್ಡಿಕೆಗೆ ವಿರುದ್ಧ ನಾನ್ ಬೇಲಬಲ್ ಎಫ್ಐಆರ್ ದಾಖಲು : ಕುಮಾರಸ್ವಾಮಿ ಮುಂದಿನ ನಡೆ ಏನು..?

11:41 AM Oct 04, 2024 IST | suddionenews
Advertisement

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ತಮ್ಮ ಪಕ್ಷದವರಿಂದಲೇ ಕುಮಾರಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಜೆಡಿಎಸ್ ಸೋಷಿಯಲ್ ಮೀಡಿಯಾ ಉಪಾಧ್ಯಕ್ಷರಾಗಿರುವ ವಿಜಯ್ ತಾತಾ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರು 50 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ. ಅದು ನಾನ್ ಬೇಲಬಲ್ ಸೆಕ್ಷನ್ ಅಡಿ ದೂರು ದಾಖಲಾಗಿದೆ.

Advertisement

ಬಿಎನ್​ಎಸ್ ಸೆಕ್ಷನ್ 3(5), 308(2), 351(2) ಅಡಿಯಲ್ಲಿ ದಾಖಲಾಗಿದೆ. 308 ಬಿಎನ್ಎಸ್ ಸೆಕ್ಷನ್​ ಅಂದ್ರೆ ಸುಲಿಗೆ ಆರೋಪ‌ ಪ್ರಕರಣವಾಗಿದೆ. ನಾನ್ ಬೇಲಬಲ್ ಕೇಸ್ ಆಗಿರುವ ಕಾರಣ, ಕುಮಾರಸ್ವಾಮಿ ಅವರನ್ನು ತಕ್ಷಣ ಅರೆಸ್ಟ್ ಮಾಡಲು ಬಹುದು. ಈ ಕೇಸ್ ಸುಮಾರು ಎರಡು ವರ್ಷಗಳ ಕಾಲ ಶಿಕ್ಷೆಯಾಗಲಿದೆ.

ಆದರೆ ಇನ್ನೊಂದು ಸೆಕ್ಷನ್ 3(5) ಇದು ಸಮಾನ ಉದ್ದೇಶ ಹೊಂದಿರುವ ಆರೋಪಿಗಳಿಗೆ ಸಂಬಂಧಿಸಿದ್ದಾಗಿದೆ‌. ಹೀಗಾಗಿ ತಕ್ಷಣವೇ ಅರೆಸ್ಟ್ ಮಾಡುವುದಕ್ಕೆ ಬರುವುದಿಲ್ಲ. ವಿಚಾರಣೆಗೆ ಏಳು ದಿನಗಳ ಕಾಲ ಅವಕಾಶ ನೀಡಬೇಕು. ಹಾಗೇ ನೋಟೋಸ್ ಗೂ ಬಾರದೆ ಇದ್ದಾಗ ಬಂಧನ ಮಾಡಬಹುದು. ನಾನ್ ಬೇಲಬಲ್ ಕೇಸ್ ಆಗಿರುವ ಕಾರಣ ಕೇಂದ್ರ ಸಚಿವ ಕುಮಾರಸ್ವಾಮಿ ಹೈಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ. ಇನ್ನು ಇದಕ್ಕೆ ಸಂಬಂಧಿಸಿದಂತೆಯೇ ಫೋನ್ ಮೂಲಕ ಕುಮಾರಸ್ವಾಮಿ ಅವರು ಬೆದರಿಕೆ ಹಾಕಿರುವ ಆರೋಪವೂ ಇದೆ. ಕುಮಾರಸ್ವಾಮಿ ಯಾವ ರೀತಿಯಾಗಿ ಕಾನೂನು ಹೋರಾಟ ಮಾಡುತ್ತಾರೆಂದು ನೋಡಬೇಕಿದೆ.

Advertisement

Advertisement
Tags :
bengaluruchitradurgaExtortion casehd‌ kumaraswamyNon-bailable FIRsuddionesuddione newsಎಚ್ ಡಿ ಕುಮಾರಸ್ವಾಮಿಚಿತ್ರದುರ್ಗನಾನ್ ಬೇಲಬಲ್ ಎಫ್ಐಆರ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸುಲಿಗೆ ಪ್ರಕರಣ
Advertisement
Next Article