For the best experience, open
https://m.suddione.com
on your mobile browser.
Advertisement

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಸಮಯ ವಿಸ್ತರಣೆ : ಸಚಿವ ರಾಮಲಿಂಗಾ ರೆಡ್ಡಿ 

02:10 PM Feb 14, 2024 IST | suddionenews
ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಸಮಯ ವಿಸ್ತರಣೆ   ಸಚಿವ ರಾಮಲಿಂಗಾ ರೆಡ್ಡಿ 
Advertisement

Advertisement
Advertisement

ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಾಹನ ಮಾಲೀಕರು ಸುಸ್ತಾಗಿ ಹೋಗಿದ್ದರು. ತಮ್ಮ ತಮ್ಮ ಗಾಡಿಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಹಾಕಿಸಲು, ಆನ್ಲೈನ್ ಮೊರೆ ಹೋಗಿದ್ದರು. ಕೊನೆಯ ದಿನ ಸಮೀಪಿಸಿದ್ದ ಕಾರಣ, ಈ ನಂಬರ್ ಪ್ಲೇಟ್ ಹಾಕಿಸಲು ಒದ್ದಾಡುತ್ತಿದ್ದರು. ಇದೀಗ ಕೊಂಚ ರಿಲ್ಯಾಕ್ಸ್ ಆಗುವಂತ ಘೋಷಣೆಯನ್ನು ಸರ್ಕಾರ ಮಾಡಿದೆ.

Advertisement

ವಿಧಾನ ಪರಿಷತ್ ಕಲಾಪದಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಕಲಾಪದ ವೇಳೆ ಸದಸ್ಯ ಮಾದೇಗೌಡ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು ಎರಡು ಕೋಟಿಗೂ ಅಧಿಕ ವಾಹನಗಳಿವೆ. ಹಳ್ಳಿಗಾಡಿನ ವಾಹನಗಳಿಗೂ ಹೆಚ್ ಎಸ್ ಆರ್ ಪಿ ನೇಮ್ ಪ್ಲೇಟ್ ಹಾಕಿಸಬೇಕಿದೆ. ಸರ್ಕಾರ ಇದಕ್ಕೆ ನೀಡಿರುವ ಗಡುವನ್ನು ವಿಸ್ತಾರ ಮಾಡಬೇಕಿದೆ. ಇದರ ಜೊತೆಗೆ ಆನ್ಲೈನ್ ನೋಂದಣಿ ಮಾಡಬೇಕಿರುವ ಕಾರಣ ಫೇಕ್ ವೆಬ್ಸೈಟ್ ಗಳ ಹಾವಳಿಯೂ ಹೆಚ್ಚಾಗಿದೆ. ಇದರ ಬಗ್ಗೆ ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

Advertisement
Advertisement

ಈ ವೇಳೆ ಈ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಾರಿಗೆ ಸಚುವ ರಾಮಲಿಂಗಾ ರೆಡ್ಡಿ, ಎಚ್ ಎಸ್ ಆರ್ ಪಿ ಪ್ಲೇಟ್ ಹಾಕಿಸಲು ಮೂರು ತಿಂಗಳುಗಳ ಕಾಲ ಗಡುವುದು ವಿಸ್ತರಣೆ ಮಾಡಲಾಗಿದೆ‌. ಫೇಕ್ ವೆಬ್ಸೈಟ್ ಗಳ ಬಗ್ಗೆಯೂ ಎಚ್ಚರವಹಿಸಲಾಗುವುದು. ಈ ಯೋಜನೆ ಪಾರದರ್ಶಕವಾಗಿದೆ ಎಂದಿದ್ದಾರೆ. ಈ ಮೂಲಕ ನಂಬರ್ ಪ್ಲೇಟ್ ಹಾಕಿಸಲು ಇನ್ನು ಮೂರು ತಿಂಗಳುಗಳ ಕಾಲ ಗಡುವು ವಿಸ್ತರಣೆಯಾಗಿದೆ. ಈ ಮೊದಲು ಫೆಬ್ರವರಿ 17 ಕೊನೆಯ ದಿನವಾಗಿತ್ತು. ಸರ್ವರ್ ಸಮಸ್ಯೆಯಿಂದ ಎಲ್ಲವೂ ನಿಧಾನವಾಗುತ್ತಿತ್ತಿ. ಈಗ ವಿಸ್ತರಣೆಯಾಗಿರುವುದು ನೆಮ್ಮದಿ ತಂದಿದೆ.

Advertisement
Tags :
Advertisement