For the best experience, open
https://m.suddione.com
on your mobile browser.
Advertisement

ತುಮಕೂರಿನವರೆಗೂ 'ನಮ್ಮ ಮೆಟ್ರೋ' ವಿಸ್ತರಣೆ : ಯಾವಾಗ, ಎಷ್ಟು ಕೋಟಿ ವೆಚ್ಚ ಮಾಹಿತಿ ನೀಡಿದ ಜಿ ಪರಮೇಶ್ವರ್..!

01:15 PM Jan 09, 2024 IST | suddionenews
ತುಮಕೂರಿನವರೆಗೂ  ನಮ್ಮ ಮೆಟ್ರೋ  ವಿಸ್ತರಣೆ   ಯಾವಾಗ  ಎಷ್ಟು ಕೋಟಿ ವೆಚ್ಚ ಮಾಹಿತಿ ನೀಡಿದ ಜಿ ಪರಮೇಶ್ವರ್
Advertisement

Advertisement

ಬೆಂಗಳೂರು: ತುಮಕೂರಿನಿಂದ ಸಿಲಿಕಾನ್ ಸಿಟಿಗೆ ಪ್ರತಿದಿನ ಸಾವಿರಾರು ಜನ ರೈಲು, ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಮೆಟ್ರೋ ವಿಸ್ತರಣೆಯಾದರೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.

ಬೆಂಗಳೂರಿನಿಂದ ತುಮಕೂರಿನವರೆಗೆ ‘ನಮ್ಮ ಮೆಟ್ರೋ’ ಸೇವೆ ಬಗ್ಗೆ ಡಿಪಿಐಆರ್ ಯೋಜನೆಯಡಿ ಅನುಮೋದನೆಗೆ ಡಾ.ಜಿ.ಪರಮೇಶ್ವರ್​ ಅವರು ಸರ್ಕಾರದ ಜೊತೆ ಚಿಂತನೆ ನಡೆಸಿದ್ದಾರಂತೆ. ಸುಮಾರು 25 ಸಾವಿರ ಕೋಟಿ ಪ್ರಾಜೆಕ್ಟ್​ನಲ್ಲಿ ಮೆಟ್ರೋ ಸೇವೆ ಕಲ್ಪಿಸಲು ಪ್ಲಾನ್​ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ತುಮಕೂರಿನವರೆಗೆ ಮೆಟ್ರೋ ಸೇವೆ ನಿರ್ಮಾಣಕ್ಕೆ ಸರ್ಕಾರದ ಚಿಂತನೆ ಮಾಡುತ್ತಿದೆ. ಮೆಟ್ರೋ ನಿರ್ಮಾಣದ ಬಗ್ಗೆ ಈಗಾಗಲೇ ಎರಡು ಕಂಪನಿಗಳ ಉತ್ಸಾಹ ತೋರಿಸಿದ್ದು, ಪಿಪಿಪಿ ಮಾಡಲ್​ನಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಪ್ಲಾನ್​ ಮಾಡಲಾಗಿದೆ ಎನ್ನಲಾಗಿದೆ.

Advertisement

ಈ ಹಿಂದೆ ನಮ್ಮ ಮೆಟ್ರೋ ತವರು ಜಿಲ್ಲೆಗೆ ವಿಸ್ತರಣೆ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಇದೀಗ ಜಿ ಪರಮೇಶ್ವರ್ ಅವರು ತವರು ಜಿಲ್ಲೆಗೆ ನಮ್ಮ ಮೆಟ್ರೋ ವಿಸ್ರಿಸುವ ಬಗ್ಗೆ ಮಾತನಾಡಿದ್ದಾರೆ.

Tags :
Advertisement