For the best experience, open
https://m.suddione.com
on your mobile browser.
Advertisement

ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ವಾಪಸ್ ಆದರೂ, ಧಾರವಾಡದಲ್ಲಿದ್ದಾರೆ 17 ಸ್ಪರ್ಧಿಗಳು..!

02:13 PM Apr 23, 2024 IST | suddionenews
ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ವಾಪಸ್ ಆದರೂ  ಧಾರವಾಡದಲ್ಲಿದ್ದಾರೆ 17 ಸ್ಪರ್ಧಿಗಳು
Advertisement

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ವಾಪಸ್ ತೆಗೆದುಕೊಳ್ಳುವುದಕ್ಕೆ ನಿನ್ನೆಯೇ ಕೊನೆ ದಿನವಾಗಿತ್ತು. ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು. ಆದರೆ ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಆದರೂ ಧಾರವಾಢ ಲೋಕಸಭಾ ಕ್ಷೇತ್ರದಲ್ಲಿ ಇನ್ನು ಹದಿನೇಳು ಸ್ಪರ್ಧಿಗಳಿದ್ದಾರೆ.

Advertisement
Advertisement

ಧಾರಾವಾಡ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಚುನಾವಣಾ ಚಿತ್ರಣದ ಮಾಹಿತಿ ನೀಡಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 25 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು‌. 25 ಅಭಯರ್ಥಿಗಳಲ್ಲಿ ಎಂಟು ಅಭ್ಯರ್ಥಿಗಳು ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದಾರೆ‌. ಅಂತಿಮವಾಗಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ:

Advertisement
Advertisement

ಭಾರತೀಯ ಜನತಾ ಪಾರ್ಟಿಯಿಂದ ಪ್ರಲ್ಹಾದ್ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ ಜಾವೀದ ಅಹಮದ್ ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾಯಿಲ್ ಮುಕ್ತಿ, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದ ವೆಂಕಟೇಶ ಪ್ರಸಾದ ಎಚ್., ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಶರಣಬಸವ ಗೋನವಾರ ಮತ್ತು ಟಿಪ್ಪು ಸುಲ್ತಾನ ಪಾರ್ಟಿಯಿಂದ ಬಂಕಾಪುರ ಶೌಖತ್ ಅಲಿ, ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಗುರಪ್ಪ ಹೆಚ್.ಇಮ್ರಾಪೂರ, ಪ್ರವೀಣ ಹ.ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಮತ್ತು ಎಸ್.ಎಸ್.ಪಾಟೀಲ್ ಕಣದಲ್ಲಿದ್ದಾರೆ.

Advertisement
Tags :
Advertisement