For the best experience, open
https://m.suddione.com
on your mobile browser.
Advertisement

ದರ್ಶನ್ ವಿಚಾರ ಈಶ್ವರಪ್ಪ ಬೇಸರ : ಮಾಧ್ಯಮದವ್ರಿಗೆ ಸಂಸಾರಸ್ಥರು ನೋಡುವಂತ ಸುದ್ದಿ ಹಾಕ್ರಪ್ಪ ಅಂದ್ರು..!

03:30 PM Sep 16, 2024 IST | suddionenews
ದರ್ಶನ್ ವಿಚಾರ ಈಶ್ವರಪ್ಪ ಬೇಸರ   ಮಾಧ್ಯಮದವ್ರಿಗೆ ಸಂಸಾರಸ್ಥರು ನೋಡುವಂತ ಸುದ್ದಿ ಹಾಕ್ರಪ್ಪ ಅಂದ್ರು
Advertisement

Advertisement
Advertisement

ಶಿವಮೊಗ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಅಂಡ್ ಗ್ಯಾಂಗ್ ಈಗಾಗಲೇ ಜೈಲು ಸೇರಿದೆ. ಕೋರ್ಟ್ ನಲ್ಲಿ ವಿಚಾರಣೆಯೂ ನಡೆಯುತ್ತಿದೆ. ಪರಪ್ಪನ ಅಗ್ರಹಾರದಿಂದ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ಮಾಧ್ಯಮದಲ್ಲಿ ಆಲ್ಮೋಸ್ಟ್ ಬೆಳಗ್ಗೆಯಿಂದ ಸಂಜೆವರೆಗೂ ದರ್ಶನ್ ಅಪ್ಡೇಟ್ ಸುದ್ದಿ ಬರುತ್ತಲೇ ಇರುತ್ತದೆ. ಈ ವಿಚಾರಕ್ಕೆ ಕೆ.ಎಸ್.ಈಶ್ವರಪ್ಪ ಬೇಸರ ಹೊರ ಹಾಕಿದ್ದಾರೆ.

ಮಾಧ್ಯಮದವರ ಬಳಿ ಮಾತನಾಡಿದ ಈಶ್ವರಪ್ಪ ಅವರು, ನಟ ದರ್ಶನ್ ವಿಚಾರವಾಗ ಸತ್ಯ ಹೇಳ್ತೀನಿ ಕೇಳಿ. ನಂಗೆ ಟಿವಿ ನೋಡುವುದಕ್ಕೇನೆ ಬೇಸರ ಆಗೋಗಿದೆ. ಮನೆಯಲ್ಲಿ ಕುಟುಂಬಸ್ಥರು ನೋಡುವುದಕ್ಕೆಂದು ಟಿವಿ ತಂದಿಟ್ಟುಕೊಂಡಿದ್ದೇವೆ. ಆದರೆ ಇತ್ತೀಚೆಗೆ ಸಂಸಾರಸ್ಥರು ಟಿವಿ ನ್ಯೂಸ್ ನೋಡುವುದಕ್ಕೆ ಆಗುತ್ತಿಲ್ಲ. ಒಂದು ಚಾನೆಲ್ ನಲ್ಲಿ ಇದು ಬರ್ತಾ ಇದೆ ಎಂದುಕೊಂಡು, ಮತ್ತೊಂದು ಚಾನೆಲ್ ಬದಲಾಯಿಸಿದರೆ ಅದರಲ್ಲೂ ಅದೇ ಬರುತ್ತಿರುತ್ತೆ. ಟಿವಿಯವರಿಗೆ ಬೇರೆ ಕೆಲಸವೇ ಇಲ್ಲವಾ ಎಂಬುದು ನನ್ನ ಪ್ರಶ್ನೆ.

Advertisement
Advertisement

ದರ್ಶನ್ ವಿಚಾರಕ್ಕೆ ಸಾಷ್ಟಾಂಗ ನಮಸ್ಕಾರ ಮಾಡುತ್ತೀನಿ. ಪುಣ್ಯಾತ್ಮ ದರ್ಶನ್ ಸಾಕಪ್ಪೋ ಸಾಕಯ್ತು ಅನ್ನುವ ಹಾಗೇ ಆಗಿದೆ. ಕೈ ಮುಗಿತೀನಿ. ಇಂತಹ ಕೆಟ್ಟದ್ದನ್ನು ತೋರಿಸಬೇಡಿ ಸಾಕು ಮಾಡಿ. ಒಳ್ಳೆಯದ್ದನ್ನು ತೋರಿಸಿ ಎಂದು ಈಶ್ವರಪ್ಪ ಮಾಧ್ಯಮದವರಿಗೆ ಸಲಹೆ ನೀಡಿದ್ದಾರೆ. ಬೆಳಗ್ಗೆಯಿಂದ ಸಂಜೆ ತನಕ ದರ್ಶನ್ ಸುದ್ದಿಯೇ ತೋರಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವುದಕ್ಕೆ ಆಗದೆ ಒದ್ದಾಡುತ್ತಿದ್ದಾರೆ. ಟಿವಿ ಇಲ್ಲ, ಪ್ರೋಟಿನ್ ಇಲ್ಲ, ಎಲ್ಲದಕ್ಕೂ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅದು ಕಾನೂನಿಗೆ ವಿರುದ್ಧವಾಗರುವ ಕಾರಣ ಅದ್ಯಾವ ಸೌಲಭ್ಯವನ್ನು ನೀಡುತ್ತಿಲ್ಲ.

Advertisement
Tags :
Advertisement