Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡ ಈಶ್ವರಪ್ಪ..!

09:32 PM Apr 22, 2024 IST | suddionenews
Advertisement

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ ಎಸ್ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ತನ್ನ ಮಗನಿಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ನಾಮಪತ್ರ ಹಿಂಪಡೆಯುವುದಕ್ಕೆ ಕಡೆಯ ದಿನಾಂಕವಾಗಿತ್ತು. ಆದರೂ ಈಶ್ವರಪ್ಪ ಅವರು ನಾಮಪತ್ರ ವಾಪಸ್ ತೆಗೆದುಕೊಂಡಿಲ್ಲ. ಹೀಗಾಗಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

Advertisement

ಈಶ್ವರಪ್ಪ ಅವರು ಬಂಡಾಯವೆದ್ದ ದಿನದಿಂದಾನೂ ಬಿಜೆಪಿ ನಾಯಕರು ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದರು. ಅಮಿತ್ ಶಾ ಅವರು ಕಿಉಡ ದೆಹಲಿಗೆ ಬರುವುದಕ್ಕೆ ಹೇಳಿದ್ದರು. ಆದರೆ ಭೇಟಿ ಮಾಡದೆ ಇದ್ದ ಕಾರಣ, ಇನ್ನಷ್ಟು ಕೋಪಗೊಂಡ ಈಶ್ವರಪ್ಪ, ದೆಹಲಿಯಿಂದಾನೇ ಸ್ಪರ್ಧೆ ಘೋಷಿಸಿದ್ದರು. ಇದೀಗ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಅವರ ವರದಿಯೇ ಕಾರಣ ಎಂದು ತಿಳಿದಿರುವ ಈಶ್ವರಪ್ಪ, ಯಡಿಯೂರಪ್ಪ ಪುತ್ರನ ವಿರುದ್ಧವೇ ಸ್ಪರ್ಧೆಗೆ ನಿಂತಿದ್ದಾರೆ. ಪ್ರಚಾರದ ವೇಳೆ, ಸುದ್ದಿಗೋಷ್ಟಿ ವೇಳೆ ಯಡಿಯೂರಪ್ಪ ಹಾಗೂ ಪುತ್ರರನ್ನು ನಿಂದಿಸುತ್ತಲೇ ಇರುತ್ತಾರೆ.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಇಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿಲ್ಲ. ಇದರಿಂದ ಬಿಜೆಪಿ ಪಕ್ಷದ ಶಿಸ್ತು ಉಲ್ಲಂಘನೆ ಆಗಿದೆ. ಹೀಗಾಗಿ ಪಕ್ಷದ ಶಿಸ್ತು ಸಮಿತಿಯಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಶಿವಮೊಗ್ಗ ಲೋಕಸಭಾ ಚುನಾವಣೆ ಎರಡನೇ ಹಂತದಲ್ಲಿ ನಡೆಯಲಿದ್ದು, ಮೇ 7 ರಂದು ನಡೆಯಲಿದೆ. ಸದ್ಯ ಬಿಜೆಪಿಯಿಂದ ಬಿವೈ ರಾಘವೇಂದ್ರ, ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್ ಕಣದಲ್ಲಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ಇದ್ದಾರೆ.

Advertisement

Advertisement
Tags :
bangalorebengaluruBjpchitradurgaeshwarappaexpelled from BJP partyks eshwarappasuddionesuddione newsಈಶ್ವರಪ್ಪಉಚ್ಛಾಟನೆಚಿತ್ರದುರ್ಗಬಿಜೆಪಿ ಪಕ್ಷಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article