ದರ್ಶನ್ ಕಸ್ಟಡಿ ಅಂತ್ಯ..ಜಾಮೀನಿಗೆ ಅರ್ಜಿ ಸಲ್ಲಿಕೆ ಸಾಧ್ಯತೆ.. ಏನಾಗಲಿದೆ ಭವಿಷ್ಯ..?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿ ಮೂರು ತಿಂಗಳು ಕಳೆದಿದೆ. ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ದರ್ಶನ್ ಅಂಡ್ ಗ್ಯಾಂಗ್ ನ ಕರಾಳತೆಯೂ ಅನಾವರಣವಾಗಿದೆ. ವಿಸ್ತರಿಸಿದ ದರ್ಶನ್ ಅಂಡ್ ಕಸ್ಟಡಿ ಕೂಡ ಇಂದು ಅಂತ್ಯವಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಜಾಮೀನಿಗೆ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಳ್ಳಾರಿ ಜೈಲಿಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದ ವಿಜಯಲಕ್ಷ್ಮೀ ಅವರು ದರ್ಶನ್ ಕಡೆಯಿಂದ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದರು.
ಚಾರ್ಜ್ ಶೀಟ್ ಸಲ್ಲಿಕೆಯಾಗುವುದನ್ನೆ ದರ್ಶನ್ ಕಡೆಯ ವಕೀಲರು ಕಾಯುತ್ತಿದ್ದರು. ಇಂದಿನಿಂದ ರೇಣುಕಾಸ್ವಾಮಿ ಕೇಸ್ ಹೊಸ ರೂಪ ಪಡೆಯಲಿದೆ. ಕೋರ್ಟ್ ನಲ್ಲಿ ವಾದ ಪ್ರತಿವಾದವೂ ಶುರುವಾಗಲಿದೆ. ದರ್ಶನ್ ಗೆ ಜಾಮೀನು ಸಿಗುವ ಸಾಧ್ಯತೆ ಎಷ್ಟಿದೆ ಎಂಬುದು ಇಲ್ಲಿಂದ ಶುರುವಾಗುತ್ತದೆ.
ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ. ಇದರಿಂದ ದರ್ಶನ್ ಮತ್ತಷ್ಟು ಆತಂಕಗೊಂಡಿದ್ದಾರೆ. ಜೊತೆಗೆ ಬಳ್ಳಾರಿಗೆ ಓಡಾಡುವುದಕ್ಕೆ ಕುಟುಂಬಸ್ಥರಿಂದ ಕೂಡ ಕಷ್ಟವಿದೆ. ಹೀಗಾಗಿ ಬಳ್ಳಾರಿ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಚಾರ್ಜ್ ಶೀಟ್ ಆಧಾರದ ಮೇಲೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಎ2 ಸ್ಥಾನದಲ್ಲಿಯೇ ಇದ್ದಾರೆ. ವಿಚಾರಣೆಯ ವೇಳೆ ಅಪರಾಧ ಪ್ರೂವ್ ಆದರೆ ಶಿಕ್ಷೆಯ ಪ್ರಮಾಣವೂ ಪ್ರಕಟವಾಗಲಿದೆ. ಜಾಮೀನು ಸಿಗುತ್ತಾ, ಶಿಕ್ಷೆಯಾಗುತ್ತಾ ಇನ್ಮುಂದಿನ ಬೆಳವಣಿಗೆಯಲ್ಲಿ ತಿಳಿಯಲಿದೆ. ಇಂದು ಜಾಮೀನಿಗೆ ಅರ್ಜಿ ಸಲ್ಲಿಸಿರುವ ದರ್ಶನ್ ಎದೆಯಲ್ಲಿ ಢವ ಢವ ಶುರುವಾಗಿದೆ.