For the best experience, open
https://m.suddione.com
on your mobile browser.
Advertisement

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ : ಉದ್ಯಮಿಗಳು ವಿರೋಧ.. ಸರ್ಕಾರದಿಂದ ಭರವಸೆ..!

01:47 PM Jul 17, 2024 IST | suddionenews
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ   ಉದ್ಯಮಿಗಳು ವಿರೋಧ   ಸರ್ಕಾರದಿಂದ ಭರವಸೆ
Advertisement

ಬೆಂಗಳೂರು: ಖಾಸಗಿ ಕ್ಷೇತ್ರದ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ರಾಜ್ಯ ಸರ್ಕಾರ ಮಂಗಳವಾರ ಅನುಮೋದನೆ ಮಾಡಿದೆ. ಕರವೇ ನಡೆಸಿದ ಹೋರಾಟಕ್ಕೆ ಈ ಮೂಲಕ ಜಯ ಸಿಕ್ಕಂತೆ ಆಗಿದೆ. ಆದರೆ ಇದರ ನಡುವೆ ಖಾಸಗಿ ಉದ್ಯಮಿಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಮೋಹನ್ ದಾಸ್ ಪೈ ಅವರು, ಈ ಮಸೂದೆಯನ್ನು ಜಾರಿಗೆ ತರಬಾರದು. ಇದು ಸಂವಿಧಾನ ವಿರೋಧಿಯಾಗಿದೆ. ಖಾಸಗಿ ಕಂಪನಿಗಳಿಗೆ ನೇಮಕ ಮಾಡಿಕೊಳ್ಳುವಾಗ ಸರ್ಕಾರಿ ಅಧಿಕಾರಿಗಳು ಸಂದರ್ಶನಕ್ಕೆ ಬರುತ್ತಾರಾ..? ಸಂದರ್ಶನ ಸಮಯದಲ್ಲಿ ಅವರ ಭಾಷೆಯನ್ನು ಪರೀಕ್ಷಿಸಿ ನೇಮಕ ಮಾಡಿಕೊಳ್ಳಬೇಕಾ..? ಸರ್ಕಾರ ಇಂಥಹ ಮಸೂದೆಯನ್ನು ಜಾರಿಗೆ ತಂದಿರುವುದು ನಂಬಲು ಅಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

Advertisement
Advertisement

ಇದೀಗ ಉದ್ಯಮಿಗಳ ಆತಂಕಕ್ಕೆ ಸಚಿವರೇ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಇಲಾಖೆಗಳ ಬಳಿ ಸಮಾಲೋಚನೆ ನಡೆಸಿಯೇ ದನ್ನು ಜರಿಗೆ ತರಲು ಸಿಎಂ ಸಿದ್ದರಾಮಯ್ಯ ಅವರ ಬಳಿ‌ಮನವಿ ಮಾಡಿದ್ದೆವು. ಯಾರು ಭಯ ಪಡುವ ಅಗತ್ಯವಿಲ್ಲ. ನಾವೂ ಸುಧೀರ್ಗ ಸಮಾಲೋಚನೆ ನಡೆಸುತ್ತೇವೆ ಮತ್ತು ಒಮ್ಮತಕ್ಕೆ ಬರಲಿದ್ದೇವೆ. ಸ್ಥಳೀಯರಿಗೆ ಉದ್ಯೋಗ ಒದಗಿಸುವುದು ಮತ್ತು ಜೊತೆ ಜೊತೆಗೆ ಹೂಡಿಕೆದಾರರನ್ನು ಆಕರ್ಷಿಸುವುದೇ ರಾಜ್ಯ ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.

ಈ ವಿಚಾರಕ್ಕೆ ಸಚುವ ಎಂ.ಬಿ.ಪಾಟೀಲ್ ಅವರು ಮಾತನಾಡಿದ್ದು, ನಾವೂ ಚೀನಾದಂತ ದೇಶಗಳೊಂದಿಗೆ ಸೆಣೆಸಾಡಬೇಕಿದೆ. ಕನ್ನಡಿಗರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಸಿಎಂ ಮತ್ತು ಡಿಸಿಎಂ ಹಾಗೂ ಪೌರ ಕಾರ್ಮಿಕ ಸಚಿವರು, ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಕನ್ನಡಿಗರ ರಕ್ಷಣೆಯ ಜೊತೆಗೆ ಉದ್ಯಮಿಗಳ ರಕ್ಷಣೆಯೂ ಆಗಬೇಕಿದೆ ಎಂದಿದ್ದಾರೆ.

Advertisement

Advertisement
Tags :
Advertisement