ಬಿಡದಿ ತೋಟದ ಮನೆಗೆ ಚುನಾವಣಾಧಿಕಾರಿಗಳು ಎಂಟ್ರಿ : ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗಿನಿಂದ ಕುಮಾರಸ್ವಾಮಿ ಅವರ ತೋಟದ ಮನೆ ಹೆಡ್ ಕ್ವಾರ್ಟರ್ಸ್ ಆಗಿದೆ. ಇಂದು ಹೊಸತಡುಕಿನ ದಿನ ಅಲ್ಲಿ ಜೋರು ಹಬ್ಬ ನಡೆಯುತ್ತಿದೆ. ಇದನ್ನ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು.
ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ್ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ @ceo_karnataka ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ. ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ? ಎಂದು ಕೇಳಿತ್ತು.
ಇದರ ಬೆನ್ನಲ್ಲೇ ತೋಟದ ಮನೆಗೆ ದಿಢೀರನೇ ಎಂಟ್ರಿ ಕೊಟ್ಟ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಹಬ್ಬದ ದಿನ ತೋಟದ ಮನೆಯಲ್ಲಿ ಊಟಕ್ಕೆ ಸೇರಿದ್ದು ನಿಜ. ಇವತ್ತು ಯುಗಾ್ಇಯ ಹೊಸತಡುಕು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಾನು ಅಲ್ಲಿ ಪಕ್ಷದ ನಾಯಕರ ಸಭೆ ನಡೆಸಿದರೆ ಕಾಂಗ್ರೆಸ್ ಗೆ ಯಾಕೆ ಹೊಟ್ಟೆಯುರಿ..?ಬಿಜೆಪಿ ನಾಯಕರಿಗೆ ಕೇಶವಕೃಪಾ ಕೇಂದ್ರ ಕಚೇರಿಯಾಗಿರುವಾಗ ಜೆಡಿಎಸ್ ಗೆ ಬಿಡದಿಯ ತೋಟದ ಮನೆ ಶಕ್ತಿಕೇಂದ್ರ ಹಾಗೂ ಹೆಡ್ ಆಫೀಸ್ ಎಂದು ತಿರುಗೇಟು ನೀಡಿದ್ದಾರೆ.