ಚುನಾವಣಾ ಬಾಂಡ್ ಪ್ರಕರಣ : ಬಿಜೆಪಿ ನಾಯಕರಿಗೆ ಬಿಗ್ ರಿಲೀಫ್..!
ಬೆಂಗಳೂರು: ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಲಾ ಸೀತರಾಮನ್, ನಳೀನ್ ಕುಮಾರ್ ಕಟೀಲು ಸೇರಿದಂತೆ ಹಲವು ಬಿಜೆಪಿ ನಾಯಕರ ಮೇಲೆ ದೂರು ದಾಖಲಾಗಿತ್ತು. ಇದೀಗ ಆ ಕೇಸ್ ನಲ್ಲಿ ಹೆಸರು ಕೇಳಿ ಬಂದ ಎಲ್ಲಾ ನಾಯಕರಿಗೂ ಹೈಕೋರ್ಟ್ ರಿಲೀಫ್ ಕೊಟ್ಟಿದೆ.
ಈ ಕೇಸ್ ನಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ನಳಿನ್ ಕುಮಾರ್ ಕಟಿಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮುಂದಿನ ತನಿಖೆಗೆ ತಡೆಯಾಜ್ಞೆ ನೀಡಿದೆ. ನಳಿನ್ ಕುಮಾರ್ ಕಟೀಲು ಪರ ವಾದ ಮಂಡಿಸಿದ ಹಿರಿಯ ವಕೀಲ ರಾಘವನ್, ಈ ಪ್ರಕರಣದಡಿಯಲ್ಲಿ ಮಾಡಿರುವ ಆರೋಪವನ್ನು ಉಲ್ಲೇಖಿಸಿ, ಪ್ರಕತಣದಲ್ಲಿ ಸುಲಿಗೆಯ ವಿಚಾರವೇ ಬರುವುದಿಲ್ಲ. ದೂರುದಾರರು ಇಲ್ಲಿ ಒಳಸಂಚು ಮಾಡಿ ಆರೋಪ ಮಾಡಿದ್ದಾರೆ. ಮೂಲ ಅಂಶವೇ ಇಲ್ಲವೆಂದ ಮೇಲೆ ಸುಲಿಗೆ ಅಂಶ ಹೇಗೆ ಸಾಧ್ಯ ಎಂಬುದಾಗಿ ವಾದ ಮಂಡಿಸಿದ್ದಾರೆ.
ಇದನ್ನು ಆಕ್ಷೇಪಿಸಿದ ದೂರುದಾರ ಆದರ್ಶ ಐಯ್ಯರ್ ಪರ ವಕೀಲರಾದ ಪ್ರಶಾಂತ್ ಭೂಷಣ್ , ಇದು ಸುಲಿಗೆಗೆ ಒಂದು ಅತ್ಯುತ್ತವಾದ ಉದಾಹರಣೆಯಾಗಿದೆ. ನಾವು ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಅನುಸರಿಸಿದ್ದೇವೆ. ಅದರಂತೆಯೇ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ಅರ್ಜಿ ಸಲ್ಲಿಸಿದ್ದು. ಕೋರ್ಟ್ ಅದನ್ನು ಪರಿಗಣಿಸಿಯೇ ಎಫ್ಐಆರ್ಗೆ ಸೂಚನೆ ನೀಡಿದ್ದು. ಇದು ಇಡಿ ಅಧಿಕಾರಿಗಳನ್ನು ಬಳಸಿ ಬಂಧಿಸುವ ಬೆದರಿಕೆ ನೀಡಿ ಸುಲಿಗೆ ಮಾಡಲಾಗಿದೆ. ಕಂಪನಿಗಳ ಮೇಲೆ ದೌರ್ಜನ್ಯವೆಸಗಿ ಸುಲಿಗೆ ಮಾಡಿದ್ದಾರೆ. ಹೀಗಾಗಿ ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು ಎರಡು ಕಡೆ ವಾದ ಪ್ರತುವಾದ ಆಲಿಸಿದ ಕೋರ್ಟ್ ಮುಂದಿನ ತನಿಖೆಗೆ ತಡೆಯಾಜ್ಞೆ ನೀಡಿದೆ.