ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಈ ಮೂವರಿಗೆ ಜಾಮೀನು ಸುಲಭ : ಯಾಕೆ ಗೊತ್ತಾ..?
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಜೊತೆಗೆ ಅವರ ಗ್ಯಾಂಗ್ ಕೂಡ ಜೈಲು ಸೇರಿದೆ. ಜೂನ್ ತಿಂಗಳಲ್ಲಿ ಈ ಕೊಲೆನಡೆದಿರುವುದು. ಮೂರು ತಿಂಗಳು ಸಮೀಪಿಸುತ್ತಿದೆ. ಜೈಲಿನೊಳಗೆ ಎಲ್ಲರು ಆರೋಪಿಗಳು ಒದ್ದಾಡುತ್ತಿದ್ದಾರೆ. ಪವಿತ್ರಾ ಗೌಡ ಈಗಾಗಲೇ ಜಾಮೀನಿಗೆ ಅರ್ಜಿ ಹಾಕಿ, ಫೇಲ್ ಆಗಿದ್ದಾರೆ. ಇನ್ನು ದರ್ಶನ್ ಚಾರ್ಜ್ ಶೀಟ್ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಸುಮಾರು 4 ಸಾವಿರ ಪುಟಗಳಷ್ಟು ಚಾರ್ಜ್ ಶೀಟ್ ಸಿದ್ದವಾಗಿದೆಯಂತೆ. ಆದರೆ ಆರೋಪಿಗಳ ಗ್ಯಾಂಗ್ ನಲ್ಲಿ ಮೂವರ ಸುಲಭವಾಗಿ ಜಾಮೀನು ಪಡೆಯಬಹುದು ಎನ್ನಲಾಗಿದೆ.
ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಆರೋಪಿಗಳಾದ ನಿಖಿಲ್ ನಾಯ್ಕ್, ಕೇಶವ ಮೂರ್ತಿ ಹಾಗೂ ಕಾರ್ತಿಕ್ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಈ ಮೂವರು ಮೃತದೇಹ ಸಿಕ್ಕ ಮರುದಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ನಾವೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿ, ಶರಣಾಗಿದ್ದರು. ಮೃತ ದೇಹ ಸಾಗಾಟ ಹಾಗೂ ಶರಣಾಗತಿಯಾಗಲು ಮೂವರು ಒಟ್ಟಿಗೆ ಬಂದಿದ್ದರು. ಆದರೆ ಕೊಲೆಯಲ್ಲಿ ಇವರ ಪಾತ್ರವಿಲ್ಲ ಎಂಬುದು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.
ಪೊಲೀಸರು ಸಿದ್ಧ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಈ ಮೂವರ ಹೆಸರು ಆರೋಪಿ ಸ್ಥಾನದಲ್ಲಿ ಇಲ್ಲದೆ ಇರುವುದರಿಂದ ಇವರಿಗೆ ಜಾಮೀನು ಬೇಗ ಸಿಗುವ ಸಾಧ್ಯತೆ ಇದೆ. ಇನ್ನು ಪೊಲೀಸರ ಚಾರ್ಜ್ ಶೀಟ್ ಸಲ್ಲಿಕೆ ಬಳಿಕವಷ್ಟೇ ದರ್ಶನ್ ಎಷ್ಟರಮಟ್ಟಿಗೆ ಆರೋಪಿಯಾಗಿದ್ದಾರೆಂದು ತಿಳಿಯುತ್ತದೆ. ಜಾಮೀನು ಸಿಗುತ್ತಾ, ಸಿಗಲ್ವಾ ಎಂಬುದು ಆಮೇಲೆ ತಿಳಿಯುತ್ತದೆ.