Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ..!

03:33 PM Sep 20, 2024 IST | suddionenews
Advertisement

 

Advertisement

 

ಮೈಸೂರು: ಮೈಸೂರು ದಸರಾದ ಸಂಭ್ರಮ ನಾಡಿನೆಲ್ಲೆಡೆ ಶುರುವಾಗಿದೆ. ಗಜಪಡೆ ಅರಮನೆ ಆವರಣ ಸೇರಿ, ತರಬೇತಿ ಪಡೆಯುತ್ತಿವೆ. ಈ ಬಾರಿಯ ದಸರಾ ಉದ್ಘಾಟನೆ ಮಾಡುವುದು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಾಹಿತಿ ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಉದ್ಘಾಟನೆ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

Advertisement

ದಸರಾ ಮಹೋತ್ಸವಕ್ಕೆ ಅಕ್ಬೋಬರ್ 3 ರಂದು ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನಾ ಪೂಜೆ ನೆರವೇರಲಿದೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಶುರುವಾಗಲಿದೆ. ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ.

ಚಾಮುಂಡೇಶ್ವರಿ ಅಮ್ಮನವರಿಗೆ ಅಂದು ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದೆ. ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ. ನಾಡಿನ ಅಧಿದೇವತೆಯನ್ನು ಅಂಬಾರಿ ಮೇಲೆ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಕೂಡ ದಸರಾ ಎಂದರೆ ಚಾಮುಂಡಿ ಭಕ್ತರಿಗೆ ಹರುಷವೇ ಸರಿ. ಒಂಭತ್ತು ದಿನಗಳ ಕಾಲ ನವರಾತ್ರಿಯ ಸಂಭ್ರಮದಲ್ಲಿ ಮೈಸೂರು ದೀಪಾಲಂಕಾರಗಳಿಂದ ಕಂಗೊಳಿಸಲಿದೆ. ಆ ಸಮಯದಲ್ಲಿ ಮೈಸೂರು ನೋಡುವುದಕ್ಕೇನೆ ಚೆಂದ. ನಮ್ಮ ರಾಜ್ಯ ಮಾತ್ರವಲ್ಲ ವಿದೇಶಿಗರಿಗೂ ಮೈಸೂರು, ಚಾಮುಂಡಿ, ದಸರಾ ಎಂದರೆ ಬಹಳ ಇಷ್ಟ. ಈ ವರ್ಷ ಮುಂಗಾರು ಮಳೆಯೇ ಉತ್ತಮವಾಗಿರುವ ಕಾರಣ, ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಬರಗಾಲವಿದ್ದ ಕಾರಣ, ಸರಳವಾಗಿ, ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿತ್ತು.

Advertisement
Tags :
bengaluruchitradurgaDussehraHampa NagarajaiahinaugurationmysuruSahitisuddionesuddione newsಚಿತ್ರದುರ್ಗದಸರಾ ಉದ್ಘಾಟನೆಬೆಂಗಳೂರುಮೈಸೂರುಸಾಹಿತಿಸುದ್ದಿಒನ್ಸುದ್ದಿಒನ್ ನ್ಯೂಸ್ಹಂಪ ನಾಗರಾಜಯ್ಯ
Advertisement
Next Article