Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ : ಎಷ್ಟು ದಿನ..? ಯಾವಾಗಿಂದ ಎಲ್ಲಾ ಮಾಹಿತಿ ಇಲ್ಲಿದೆ..!

01:36 PM Sep 21, 2024 IST | suddionenews
Advertisement

ಬೆಂಗಳೂರು: ಶಾಲಾ ಮಕ್ಕಳು ದಸರಾ ರಜೆ ಯಾವಾಗ ಬರುತ್ತೆ ಅಂತ ಕಾಯ್ತಾ ಇರ್ತಾರೆ. 15-20 ದಿನಗಳ ಕಾಲ ರಜೆ ಸಿಕ್ಕರು ಕುಟುಂಬಸ್ಥರ ಜೊತೆಗೆ ಆರಾಮವಾಗಿ ಪ್ರವಾಸ, ನೆಂಟರಿಷ್ಟರ ಮನೆ ಅಂತ ಸುತ್ತಾಡಿಕೊಂಡು ಬರಬಹುದು ಎಂಬ ಖುಷಿ. ಈಗ ನಾಡ ಅಧಿದೇವತೆಯ ಸಂಭ್ರಮಕ್ಕೂ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 3 ರಿಂದ ದಸರಾ ಹಬ್ಬ ಜರುಗಲಿದೆ. ಈಗಾಗಲೇ ರಾಜ್ಯ ಸರ್ಕಾರ ದಸರಾ ಉದ್ಘಾಟನೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.

Advertisement

ಅಕ್ಟೋಬರ್ 3ರಂದು ದಸರಾ ಮಹೋತ್ಸವ ಆರಂಭವಾಗಿ ಅಕ್ಟೋಬರ್ 12ಕ್ಕೆ ತೆರೆಬೀಳಲಿದೆ. ಅಂದು ಜಂಬೂ ಸವಾರಿ ಮೇಲೆ ತಾಯೊ ಚಾಮುಂಡಿ ಮೆರವಣಿಗೆ ಸಾಗಲಿದೆ. ಈ ಸಮಯದಲ್ಲಿ ಮಕ್ಕಳಿಗೆ ದಸರಾ ರಜೆ ಎಂದು ನೀಡಲಾಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಅಕ್ಟೋಬರ್ 3ರಿಂದ ಅಕ್ಟೋಬರ್ 20ರ ತನಕ ರಜೆ ನೀಡಲಾಗಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಣೆ ಮಾಡಿ ರಜೆ ನೀಡಲಾಗುತ್ತದೆ. ಅಕ್ಟೋಬರ್ 21ರಿಂದ ಶಾಲೆಗಳು ಆರಂಭವಾಗಲಿವೆ.

 

Advertisement

ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಿಗೆ ದಸರಾ ರಜೆ ಇರಲಿದೆ. ದಸರಾ ರಜೆ ಹತ್ತಿರವಾಗುತ್ತಿರುವ ಕಾರಣ, ಶಾಲೆಗೆ ಎಷ್ಟು ದಿನ ರಜೆ ಇರಲಿದೆ ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಇನ್ನು 2024ನೇ ಮೈಸೂರು ದಸರಾವನ್ನು ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನಡೆಯಲಿದೆ.

Advertisement
Tags :
bengaluruchitradurgaDussehra holidayGovernment schoolsuddionesuddione newsಚಿತ್ರದುರ್ಗದಸರಾ ರಜೆ ಘೋಷಣೆಬೆಂಗಳೂರುಮಾಹಿತಿ ಇಲ್ಲಿದೆಸರ್ಕಾರಿ ಶಾಲಾಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article