Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನೀರಲ್ಲಿ ಕೆಮಿಕಲ್ ಬ್ಲಾಸ್ಟ್ ಮಾಡಿದ್ದ ಡ್ರೋನ್ ಪ್ರತಾಪ್ ಅರೆಸ್ಟ್..!

01:15 PM Dec 13, 2024 IST | suddionenews
Advertisement

ಕಳೆದ ಬಿಗ್ ಬಾಸ್ ಸೀಸನ್ ಮೂಲಕ ಮನೆಮಾತಾಗಿದ್ದ ಡ್ರೋನ್ ಪ್ರತಾಪ್ ಇದೀಗ ಪೊಲೀಸರ ವಶದಲ್ಲಿದ್ದಾರೆ. ಡ್ರೋನ್ ಪ್ರತಾಪ್ ಎಕ್ಸ್ ಪಿರಿಮೆಂಟ್ ಒಂದನ್ನು ಮಾಡಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಇತ್ತೀಚೆಗಷ್ಟೇ ಆ ಎಕ್ಸ್ ಪಿರಿಯೆಂಟ್ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಅದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಡ್ರೋನ್ ಪ್ರತಾಪ್ ಅವರನ್ನ ಪೊಲೀಸರು ಬಂಧಿಸಿದ್ದಾರೆ.

Advertisement

ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಹಾಕಿ ಬ್ಲಾಸ್ಟ್ ಮಾಡಿದ್ದರು. ಅದರ ಬಗ್ಗೆ ವಿಡಿಯೋ ಕೂಡ ಮಾಡಿದ್ದರು. ಆ ಬ್ಲಾಸ್ಟ್ ಆಗೋದನ್ನ ಎಂಜಾಯ್ ಕೂಡ ಮಾಡಿದ್ರು. ಯೂಟ್ಯೂಬ್ ನಲ್ಲಿ ಅದರ ಡಿಟೈಲ್ ವಿಡಿಯೋ ಕೂಡ ಹಾಕಿದ್ದರು. ಇದು ಪರಿಸರ ಪ್ರೇಮಿಗಳಿಗೆ ಕೋಪ ತರಿಸಿದೆ. ಇದರಿಂದ ಡ್ರೋನ್ ಪ್ರತಾಪ್ ಸಮಾಜಕ್ಕೇನು ಸಂದೇಶ ಕೊಟ್ಟಂತೆ ಆಯ್ತು ಎಂದು ಪರಿಸರ ಪ್ರೇಮಿಗಳು ಮಾತ್ರವಲ್ಲ ಸಂಶೋಧಕರು ಕೂಡ ಗರಂ ಆಗಿದ್ದಾರೆ. ಇದರಿಂದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

 

Advertisement

ಯಾಕಂದ್ರೆ ನೀರಿನಲ್ಲಿ ಸೋಡಿಯಂ ಬ್ಲಾಸ್ಟ್ ಮಾಡೋದ್ರಿಂದ ನೀರಿನಲ್ಲಿ ಜಲಚರಗಳಿಗೆ ಹಾನಿಯಾಗುತ್ತದೆ. ಆ ನೀರನ್ನ ಕುಡಿಯುವುದಕ್ಕೆ ಯೋಗ್ಯವಾಗಿರುವುದಿಲ್ಲ. ಸೋಡಿಯಂ ಬ್ಲಾಸ್ಟ್ ಮಾಡೋದ್ರಿಂದ ಏನೆಲ್ಲಾ ಸಮಸ್ಯೆಯಾಗಬಹುದು ಎಂಬ ವಿಷಯವನ್ನು ಸಾಮಾನ್ಯವಾಗಿ ಡ್ರೋನ್ ಪ್ರತಾಲ್ ತಿಳಿದುಕೊಂಡಿರುತ್ತಾರೆ. ಆದರೆ ಡ್ರೋನ್ ಪ್ರತಾಪ್ ಈ ರೀತೊ ಬ್ಲಾಸ್ಟ್ ಮಾಡಿದ್ದೇಕೆ ಎಂಬುದು ವಿಚಾರಣೆಯ ಬಳಿಕ ಗೊತ್ತಾಗಲಿದೆ. ವಿಡಿಯೋ ಆಧರಿಸಿ ಎಫ್​ಐಆರ್​ ದಾಖಲಾಗಿದೆ. BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಠಾಣೆಯಲ್ಲಿ ಡ್ರೋನ್ ಪ್ರತಾಪ್​ನ ವಿಚಾರಣೆ ನಡೆಸಿದ್ದಾರೆ.

Advertisement
Tags :
bengaluruchitradurgadrone pratapsuddionesuddione newsಅರೆಸ್ಟ್ಕೆಮಿಕಲ್ ಬ್ಲಾಸ್ಟ್ಚಿತ್ರದುರ್ಗಡ್ರೋನ್ ಪ್ರತಾಪ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article