Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಕೆ ಸುರೇಶ್ ಸೋಲಿಸಲು ಶತಾಯಗತಾಯ ಪ್ರಯತ್ನ : ಡಾ. ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತ..!

05:22 PM Mar 06, 2024 IST | suddionenews
Advertisement

 

Advertisement

ಬೆಂಗಳೂರು: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರವು ಜೋರಾಗಿದೆ. ಹೈಕಮಾಂಡ್ ನಿಂದ ಟಿಕೆಟ್ ಇನ್ನು ಟಿಕೆಟ್ ಕನ್ಫರ್ಮ್ ಆಗದೆ ಹೋದರೂ ಪ್ರಚಾರದಲ್ಲಂತೂ ಬ್ಯುಸಿಯಾಗಿದ್ದಾರೆ. ಇದೀಗ ಜೆಡಿಎಸ್ ನಿಂದ ಡಾ. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸುವ ಪ್ರಯತ್ನವಂತು ಸ್ಟ್ರಾಂಗ್ ಆಗಿಯೇ ನಡೆದಿದೆ.

 

Advertisement

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ಸದ್ಯ ಕಾಂಗ್ರೆಸ್ ಸಂಸದರಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಡಿಕೆ ಸುರೇಶ್ ಅವರನ್ನು ಸೋಲಿಸಲು ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲು ಪ್ಲ್ಯಾನ್ ನಡೆಯುತ್ತಿದೆ. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಎನ್ಡಿಎ ಸಭೆ ನಡೆಸಿ, ಚರ್ಚೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೀಶ್ವರ್ ಅವರು ಕೂಡ ಡಾ. ಮಂಜುನಾಥ್ ಅವರ ಸ್ಪರ್ಧೆಗೆ ಅಸ್ತು ಎಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಈಗ ನಾವೂ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗೋಣಾ. ಯಾರೇ ಅಭ್ಯರ್ಥಿಯಾದರೂ ಎನ್ಡಿಎ ಗೆಲುವಿಗೆ ಎಲ್ಲರೂ ಒಟ್ಟಾಗೋಣಾ ಎಂದಿದ್ದಾರೆ.

ಇನ್ನು ಈ ಸಭೆಯಲ್ಲಿ ಸಿಪಿ ಯೋಗೀಶ್ವರ್, ಮುನಿರತ್ನ, ಕುಪೇಂದ್ರ ರೆಡ್ಡಿ, ಶಾಸಕ ಎಂ ಕೃಷ್ಣಪ್ಪ, ಮಾಗಡಿ ಮಾಜಿ ಶಾಸಕ ಮಂಜುನಾಥ್, ಗೊಟ್ಟಿಗೆರೆ ಮಂಜುನಾಥ್, ಕುಣಿಗಲ್ ಜಗದೀಶ್, ನಾಗರಾಜ್ ಕನಕಪುರ ಸೇರಿದಂತೆ ಅನೇಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

Advertisement
Tags :
almostbengalurucertainchitradurgaCompetitionDr manjunathsuddionesuddione newsಖಚಿತಚಿತ್ರದುರ್ಗಡಾ. ಮಂಜುನಾಥ್ಡಿಕೆ ಸುರೇಶ್ಪ್ರಯತ್ನಬಹುತೇಕಬೆಂಗಳೂರುಶತಾಯಗತಾಯಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಪರ್ಧೆ
Advertisement
Next Article