For the best experience, open
https://m.suddione.com
on your mobile browser.
Advertisement

ಯೂಟ್ಯೂಬ್ ನಿಂದ ಡಾ.ಬ್ರೋ ತಿಂಗಳಿಗೆ ದುಡಿಯುವುದು 1 ಲಕ್ಷದ 76 ಸಾವಿರ..!

08:10 PM Aug 24, 2024 IST | suddionenews
ಯೂಟ್ಯೂಬ್ ನಿಂದ ಡಾ ಬ್ರೋ ತಿಂಗಳಿಗೆ ದುಡಿಯುವುದು 1 ಲಕ್ಷದ 76 ಸಾವಿರ
Advertisement

ಡಾ.ಬ್ರೋ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮಸ್ಕಾರ ದೇವ್ರು ಅಂತಾನೇ ವಿಡಿಯೋ ಮಾಡುವ ಗಗನ್, ಡಾ.ಬ್ರೋ ಹೆಸರಲ್ಲಿ ಕನ್ನಡಿಗರ ಮನಸ್ಸನ್ನ ಗೆದ್ದಿದ್ದಾರೆ. ಯೂಟ್ಯೂಬ್ ನಲ್ಲಂತೂ ಯಾವ ಸ್ಟಾರ್ ಗಳಿಗೂ ಇಲ್ಲ ಅಷ್ಟು ದೊಡ್ಡ ಫಾಲೋವರ್ಸ್ ಹೊಂದಿದ್ದಾರೆ. ಮಿಲಿಯನ್ ಗಟ್ಟಲೇ ಸಬ್ಸ್ಕೈಬರ್ ಇದಾರೆ. ಡಾ.ಬ್ರೋಗೆ ಅಷ್ಟೊಂದು ಫಾಲೋವರ್ಸ್ ಸುಮ್ಮನೆ ಬಂದಿಲ್ಲ. ಡಾ.ಬ್ರೋ ಅಷ್ಟು ಕಷ್ಟ ವಿಡಿಯೋಗಳನ್ನ ಮಾಡಿ ಹಾಕುತ್ತಾರೆ. ದೇಶ ವಿದೇಶಗಳನ್ನ ಸುತ್ತುತ್ತಾರೆ.

Advertisement
Advertisement

ಬೇರೆ ಬೇರೆ ದೇಶದ ಸ್ಥಳಗಳು, ಅಲ್ಲಿನ ಫುಡ್ ಹೀಗೆ ಎಷ್ಟೋ ಕಡೆ ಅಸಾಧ್ಯವಾದುದ್ದೆಲ್ಲವನ್ನು ತೋರಿಸಿದ್ದಾರೆ. ಮುಗ್ಧತೆಯ ಮಾತುಗಳಿಂದಾನೇ ಎಲ್ಲರನ್ನು ತಲುಪುತ್ತಿದ್ದಾರೆ. ಯಾವುದೇ ಭಯವಿಲ್ಲದೆ ಎಲ್ಲಾ ಕಡೆಗೂ ನುಗ್ಗುತ್ತಾರೆ. ಇಂತಹ ಡಾ.ಬ್ರೋಗೆ ಇಡೀ ಪ್ರಪಂಚ ಸುತ್ತುವ ಆಸೆ. 195 ದೇಶಗಳಿಗೂ ಹೋಗುವ ಆಸೆ.

ಯೂಟ್ಯೂಬ್ ನಿಂದ ಸಾಕಷ್ಟು ಹಣ ಸಂಪಾದನೆ ಮಾಡಬಹುದು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಅದರಂತೆ ಡಾ.ಬ್ರೋ ಬಗ್ಗೆ ಹಲವರಿಗೆ ಸಾಕಷ್ಟು ಕುತೂಹಲ ಇರುತ್ತೆ. ಆ ವಿಚಾರದ ಬಗ್ಗೆ ಸ್ವತಃ, ಸಾಕಗಷಿ ಸಮೇತ ಡಾ.ಬ್ರೋ ಮಾಹಿತಿ ನೀಡಿದ್ದಾರೆ. ಲೈವ್ ಗೆ ಬಂದಿದ್ದ ಬ್ರೋ, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ಯೂಟ್ಯೂಬ್ ನಲ್ಲಿ ನಿಮ್ಮ ತಿಂಗಳ ಆದಾಯ ಎಷ್ಟು ಎಂದು ಕೇಳಿದ್ದಾರೆ. ಅದಕ್ಕೆ ಡಾ.ಬ್ರೋ ತಮ್ಮ‌ ಮೊಬೈಲ್ ತೆಗೆದು ಸಂಪಾದನೆಯನ್ನು ತೋರಿಸಿದ್ದಾರೆ. ಅದರಲ್ಲಿ 2 ಸಾವಿರದ 100 ಡಾಲರ್ ಇತ್ತು. ಅಂದ್ರೆ 1 ಲಕ್ಷದ 76 ಸಾವಿರ ಹಣ. ಈ ತಿಂಗಳು ಬಂದಿರುವ ಹಣ ಇದು. ಆದರೆ ದೇಶ ವಿದೇಶಗಳನ್ನು ಸುತ್ತಲು ಅದರಲ್ಲಿ ಖರ್ಚು ಮಾಡಿಕೊಳ್ಳುತ್ತಾರೆ. ಹಾಗೇ ವಿಡಿಯೋ ಎಡಿಟಿಂಗ್ ಮಾಡುವುದಕ್ಕೂ ಅದರಲ್ಲಿಯೇ ಹಣ ನೀಡುತ್ತಾರೆ. ಉಳಿಯುವುದು 10-20 ಸಾವಿರ. ಆದರೆ ಇದರ ನಡುವೆ ಜಾಹೀರಾತುಗಳಿಂದಾನೂ ಒಳ್ಳೆಯ ಹಣ ಅವರ ಕೈ ಸೇರುತ್ತಿದೆ. ಈ ಬಗ್ಗೆಯೂ ಹೇಳಿಕೊಂಡಿದ್ದಾರೆ.

Advertisement

Advertisement
Tags :
Advertisement