For the best experience, open
https://m.suddione.com
on your mobile browser.
Advertisement

ದಾವಣಗೆರೆಯಲ್ಲಿ ಡಿಸೆಂಬರ್ 23, 24 ಮತ್ತು 25 ರಂದು ದೋಸೋತ್ಸವ : ಗ್ರಾಹಕರಿಗೆ ಗುಣಮಟ್ಟದ ಬೆಣ್ಣೆದೋಸೆಗಳನ್ನು ನೀಡಲು ಜಿಲ್ಲಾಧಿಕಾರಿ ಸೂಚನೆ

07:22 PM Dec 16, 2023 IST | suddionenews
ದಾವಣಗೆರೆಯಲ್ಲಿ ಡಿಸೆಂಬರ್ 23  24 ಮತ್ತು 25 ರಂದು ದೋಸೋತ್ಸವ   ಗ್ರಾಹಕರಿಗೆ ಗುಣಮಟ್ಟದ ಬೆಣ್ಣೆದೋಸೆಗಳನ್ನು ನೀಡಲು ಜಿಲ್ಲಾಧಿಕಾರಿ ಸೂಚನೆ
Advertisement

ದಾವಣಗೆರೆ, ಡಿ.16: ಅಂತರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆ ಬೆಣ್ಣೆ ದೋಸೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಡಿ.23, 24 ಮತ್ತು 25 ರಂದು ದೋಸೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬೆಣ್ಣೆದೋಸೆಯನ್ನು ನೀಡಲು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಬೆಣ್ಣೆ ದೋಸೆ ಹೋಟೇಲ್ ಮಾಲೀಕರಿಗೆ ಸೂಚಿಸಿದರು.

Advertisement
Advertisement

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೋಸೋತ್ಸವದ ಕುರಿತಂತೆ ಬೆಣ್ಣೆ ದೋಸೆ ಹೋಟೆಲ್ ಮಾಲೀಕರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

Advertisement

ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ನೀಡುವ ಉದ್ದೇಶದಿಂದ ಡಿ.23, 24 ಮತ್ತು 25 ರಂದು ನಗರದ ಬಾಪೂಜಿ ಎಂಬಿಎ ಮೈದಾನ ಮತ್ತು ಗ್ಲಾಸ್‍ಹೌಸ್ ಮುಂಭಾಗದಲ್ಲಿ ದೋಸೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಬೆಳಿಗ್ಗೆ 8 ರಿಂದ ದೋಸೋತ್ಸವ ಪ್ರಾರಂಭವಾಗಲಿದ್ದು, ಒಂದು ಬೆಣ್ಣೆ ದೋಸೆಗೆ ರೂ.60/- ಹಾಗೂ 1 ಪ್ಲೇಟ್ ಖಾಲಿ ದೋಸೆಗೆ ರೂ.60/- ಗಳನ್ನು ನಿಗಧಿಪಡಿಸಲಾಗಿದೆ. ದೋಸೆ ಅಂಗಡಿ ಮಾಲೀಕರು ಕಾರ್ಯಕ್ರಮದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಸುಲಭ ವಿಧಾನ ಅನುಸರಿಸಬೇಕು. ಹಾಗೂ ಟೋಕನ್ ವ್ಯವಸ್ಥೆ ಮಾಡಿಕೊಳ್ಳಬೇಕು.

Advertisement

ಡಿ.23, 24 ರಂದು ವೀರಶೈವ ಅಧೀವೇಶನವಿರುವುದರಿಂದ ಜನಸಂದಣೆ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ಅರೆಬರೆ ಬೇಯಿಸಿದ ದೋಸೆಗಳನ್ನು ನೀಡದೇ ಉತ್ತಮ ಗುಣಮಟ್ಟದ ಬೆಣ್ಣೆದೋಸೆಗಳನ್ನು ನೀಡಬೇಕು. ದೋಸೆ ಸ್ಟಾಲ್‍ಗಳಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿಗಳ ವ್ಯವಸ್ಥೆ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂದರು.

ಹೋಟೆಲ್ ಮಾಲೀಕರು ತ್ಯಾಜ್ಯ ಪದಾರ್ಥಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡಬೇಕು. ದೋಸೆ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸಬಾರದು. ಸಂಬಂಧಿಸಿದ ಅಧಿಕಾರಿಗಳು ದೋಸೆಯ ಗುಣಮಟ್ಟ, ದೋಸೆಯ ರುಚಿ ತಪಸಾಣೆ ಸ್ಟಾಲ್ ಗಳ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.

ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ದರಾಮ ಮರಿಹಾಳ್, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಡಾ.ಎಂ.ಬಿ ಅಶ್ವಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್ ಷಣ್ಮುಖಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.

Advertisement
Tags :
Advertisement