Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

09:31 PM Sep 19, 2024 IST | suddionenews
Advertisement

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ ಹುದ್ದೆಗೆ ವಯಸ್ಸಿನ ಮಿತಿಯನ್ನು ಹೆಚ್ಚಾಗಿಯೇ ನೀಡಿದ್ದಾರೆ. 43 ವರ್ಷವಾಗಿದ್ದರು ಅರ್ಜಿ ಹಾಕಬಹುದು, ಕೆಲಸ ಪಡೆಯಬಹುದು. ಹೇಗೆ ಎಂಬ ಮಾಹಿತಿ ಮುಂದಿದೆ ನೋಡಿ.

Advertisement

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪಿಡಿಓ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಕರ್ನಾಟಕ ಲೋಕಸೇವಾ ಆಯೋಗ ಆದೇಶವನ್ನು ಹೊರಡಿಸಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಸಿ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಲಾಗುತ್ತದೆ. ಈಗಾಗಲೇ ಹೊರಡಿಸಿರುವ ಅಧಿಸೂಚನೆ ಮತ್ತು ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಿ, ಆದೇಶಿಸಲಾಗಿದೆ.

ಪಿಡಿಒ ಉಳಿಕೆ ಹುದ್ದೆಗಳು 150 ಪೋಸ್ಟ್ ಗಳಿವೆ. ಅದಕ್ಕೆ ಅಪ್ಲೈ ಮಾಡುವವರು ಯಾವುದಾದರೂ ಸರಿ ಡಿಗ್ರಿ ಪಾಸಾಗಿರಬೇಕು. ಹೈದರಬಾದ್ ವೃಂದದಲ್ಲಿ 97 ಹುದ್ದೆಗಳಿದ್ದು, ಒಟ್ಟು 247 ಹುದ್ದೆಗಳು ಖಾಲಿ ಇದಾವೆ.

Advertisement

ಅರ್ಜಿ ಸಲ್ಲಿಸಲು ಕನಿಷ್ಠ-18 ವರ್ಷಗಳು ಪೂರ್ಣವಾಗಿರಬೇಕು

ಸಾಮಾನ್ಯ ವರ್ಗದವರಿಗೆ- 35 ವರ್ಷಗಳು ಇದ್ದಿದ್ದನ್ನ 38 ವರ್ಷಗಳು ಮಾಡಲಾಗಿದೆ.

2ಎ, 2ಬಿ, 3ಎ, 3ಬಿ, 38- 38 ವರ್ಷಗಳು ಇರುವುದನ್ನ 41 ವರ್ಷಕ್ಕೆ ಏರಿಕೆ ಮಾಡಿದೆ.

ಎಸ್​​ಸಿ, ಎಸ್​ಟಿ, ಪ್ರವರ್ಗ1- 40 ವರ್ಷ ಇದ್ದಿದ್ದನ್ನ 43 ವರ್ಷಕ್ಕೆ ಏರಿಸಲಾಗಿದೆ.

Advertisement
Tags :
bengaluruchitradurgaPDO ಹುದ್ದೆsuddionesuddione newsಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article