Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂಗ್ಲಿಷ್ ಭಾಷೆಗಾಗಿ ಕನ್ನಡ ಬಿಡಬೇಡಿ : ಸುಧಾಮೂರ್ತಿ ಕಿವಿಮಾತು

12:36 PM Jan 13, 2024 IST | suddionenews
Advertisement

ಬೆಂಗಳೂರು: ಕನ್ನಡದವರೇ ಕನ್ನಡ ಮಾತನಾಡದೆ, ಕನ್ನಡದ ಉಳಿವಿಗಾಗಿ ಹೋರಾಟ ಶುರು ಮಾಡಿರುವುದೇ ದುರದೃಷ್ಟಕರ. ಕನ್ನಡದ ನೆಲದಲ್ಲಿ ಬೇರೆ ಭಾಷೆಗೇನೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಕನ್ನಡವನ್ನು ಮರೆಯಬೇಡಿ ಎಂದು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಕೂಡ ಮನವಿ ಮಾಡಿಕೊಂಡಿದ್ದಾರೆ.

Advertisement

ಬ್ರ್ಯಾಂಡ್ ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಮೂರ್ತಿ ಅವರು, ಇಂಗ್ಲಿಷ್ ಮಾತನಾಡಬೇಕು ಅಂತ ಕನ್ನಡವನ್ನು ಮರೆಯಬೇಡಿ ಎಂದಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಅಂದರೆ ಕನ್ನಡ. ಮಕ್ಕಳ ಮನಸ್ಸು ಯಾವುದೇ ಪೂರ್ವ ಪೀಡತವಾಗಿರದೇ ಇರಲಿ. ನಾನು ಮಕ್ಕಳ ಪುಸ್ತಕ ಬರೆದಾಗ ಮಕ್ಕಳನ್ನೆ ಕೇಳುತ್ತೀನಿ, ಏನಾದರೂ ತಪ್ಪಿದ್ದರೆ ಹೇಳಿ ಅಂತ. ಬ್ರೈಟ್ ಐಡಿಯಾ ಬರುವುದೇ ಮಕ್ಕಳಿಂದ ಎಂದು ಹೇಳುವ ಮೂಲಕ ಕನ್ನಡ ಬಳಸಿ, ಕನ್ನಡ ಉಳಿಸಿ ಎಂಬ ಕಿವಿ ಮಾತು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬೇರೆ ರಾಜ್ಯದಿಂದ ಬಂದವರೇ ಹೆಚ್ಚು. ಎಲ್ಲಾ ಅಂಗಡಿಗಳು, ಶಾಪ್ ಗಳಲ್ಲೂ ಕನ್ನಡದ ಬೋರ್ಡ್ ಕಡ್ಡಾಯ ಮಾಡಲಾಗಿದೆ. ಆದರೂ ಕೆಲವೊಂದು ಕಡೆ ಆ ಕಡ್ಡಾಯದ ನೀತಿ ಕಾಣಿಸುವುದಿಲ್ಲ. ಹೀಗಾಗಿ ಇತ್ತಿಚೆಗೆ ಕನ್ನಡಪರ ಸಂಘಟನೆಗಳು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಕನ್ನಡ ಬಳಕೆ ಕಡ್ಡಾಯಕ್ಕಾಗಿ ಪ್ರತಿಭಟನೆ ನಡೆಸಿ ಜೈಲು ಸೇರಿದ್ದಾರೆ. ಇನ್ನು ಹಲವು ಕನ್ನಡ ಪರ ಹೋರಾಟಗಾರರಿಗೆ ಜೈಲುವಾಸವೇ ಮುಂದುವರೆದಿದೆ.

Advertisement

Advertisement
Tags :
bangaloreDon't leave KannadaEnglish LanguageSudha MurtySudhamurthyಇಂಗ್ಲಿಷ್ ಭಾಷೆಕನ್ನಡ ಬಿಡಬೇಡಿಕಿವಿಮಾತುಬೆಂಗಳೂರುಸುಧಾಮೂರ್ತಿ
Advertisement
Next Article