ಕಾಂತರಾಜು ವರದಿಗೆ ಸಿಎಂ ಓಕೆ ಅಂದ್ರೆ ಡಿಸಿಎಂ ನೋ ಅಂತಿರೋದ್ಯಾಕೆ : ಉಳಿದಂತೆ ಯಾರಿಗೆಲ್ಲಾ ವಿರೋಧವಿದೆ ಗೊತ್ತಾ..?
ಕಾಂತರಾಜು ಅವರ ಜಾತಿಗಣತಿ ವರದಿಯನ್ನು ಸ್ವೀಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ. ಈ ವಿಚಾರ ಕಾಂಗ್ರೆಸ್ ಸರ್ಕಾರದಲ್ಲಿಯೇ ಕೆಲವರಿಗೆ ಒಪ್ಪಿಗೆ ಇಲ್ಲ. ಕಾಂತರಾಜು ವರದಿ ಸ್ವೀಕಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಒಪ್ಪಿಗೆ ಸೂಚಿಸಿಲ್ಲ. ಚಿತ್ರದುಗದಲ್ಲಿ ನಡೆದ ಸಮಾವೇಶದಲ್ಲೂ ಕಾಂತರಾಜು ವರದಿ ಸ್ವೀಕಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈಗ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಸ್ವೀಕಾರ ಮಾಡಿದರೆ ಏನೆಲ್ಲಾ ಪರಿಣಾಮ ಬೀರಬಹುದು ಎಂಬ ಲೆಕ್ಕಚಾರವೂ ಶುರುವಾಗಿದೆ.
ಪ್ರಸ್ತುತ ಕಾಂತರಾಜು ವರದಿಗೆ ಪರ –ವಿರೋಧಗಳು ಇದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಯಾರೆಲ್ಲಾ ಪರವಾಗಿದ್ದಾರೆ, ಯಾರೆಲ್ಲಾ ವಿರೋಧವಾಗಿದ್ದಾರೆ ಎಂಬ ಡಿಟೈಲ್ ಇಲ್ಲಿದೆ. ಕಾಂತರಾಜು ವರದಿ ಪರವಾಗಿ, ಕೆ.ಹೆಚ್. ಮುನಿಯಪ್ಪ, ಸಚಿವ ಕೆ.ಜೆ. ಜಾರ್ಜ್, ಸಚಿವ ಸತೀಶ್ ಜಾರಕಿಹೊಳಿ, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಹೆಚ್.ಸಿ. ಮಹಾದೇವಪ್ಪ, ಸಚಿವ ಕೆ.ಎನ್. ರಾಜಣ್ಣ, ಸಚಿವ ಆರ್.ಬಿ. ತಿಮ್ಮಾಪುರ, ಸಚಿವ. ಶಿವರಾಜ ತಂಗಡಗಿ, ಸಚಿವ ಮಂಕಾಳ ವೈದ್ಯ,, ಸಚಿವ ರಹೀಂ ಖಾನ್, ಸಚಿವ ಸಂತೋಷ ಲಾಡ್, ಸಚಿವ ಬೈರತಿ ಸುರೇಶ್, ಸಚಿವ ಮಧು ಬಂಗಾರಪ್ಪ, ಸಚಿವ ನಾಗೇಂದ್ರ, ಸಚಿವ ದಿನೇಶ್ ಗುಂಡೂರಾವ್ ಪರವಾಗಿದ್ದಾರೆ.
ಡಿ.ಕೆ.ಶಿವಕುಮಾರ್, ಕೃಷ್ಣಭರೇಗೌಡ, ಕೆ.ವೆಂಕಟೇಶ್, ಎಂ.ಸಿ.ಸುಧಾಕರ್, ಚಲುವರಾಯಸ್ವಾಮಿ, ಹೆಚ್.ಕೆ ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಶಿವಾನಂದ್ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ, ಶರಣ್ ಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಈ ವರದಿಗೆ ವಿರೋಧಿಸುತ್ತಿದ್ದಾರೆ.