Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೇಲೆ ಬ್ಯಾಡ್ಮಿಟನ್ ಆಟಗಾರ್ತಿ ಸೈನಾ ‌ನೆಹ್ವಾಲ್ ಕೆಂಡಾಮಂಡಲರಾಗಿದ್ದು ಯಾಕೆ ಗೊತ್ತಾ..?

09:40 PM Mar 30, 2024 IST | suddionenews
Advertisement

ದಾವಣಗೆರೆ: ಚುನಾವಣಾ ಹಿನ್ನೆಲೆ ಶಾಮನೂರು ಶಿವಶಂಕರಪ್ಪನವರು ಇತ್ತಿಚೆಗೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ದ ಮಾತನಾಡಿದ್ದರು. ದಾವಣಗೆರೆಯಲ್ಲಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡಲಿಕ್ಕೆ ಲಾಯಕ್ಕು. ಆಕೆಗೆ ಸರಿಯಾಗಿ ಮಾತನಾಡಲು ಬರಲ್ಲ. ದಾವಣಗೆರೆ ಜಿಲ್ಲೆಯ ಸಮಸ್ಯೆಗಳು ಏನು ಅನ್ನೋದೇ ಆ ಅಭ್ಯರ್ಥಿಗೆ ಗೊತ್ತಿಲ್ಲ ಎಂದಿದ್ದರು. ಗಾಯತ್ರಿ ಸಿದ್ದೇಶ್ವರ್ ಅಡುಗೆ ಮಾಡುವಿದಕ್ಕಷ್ಟೇ ಲಾಯಕ್ಕು ಎಂದಿದ್ದರು. ಈ ಹೇಳಿಕೆಗೆ ಹಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಬ್ಯಾಡ್ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ.

Advertisement

 

ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಖಂಡಿಸಿರುವ ಸೈನಾ ನೆಹ್ವಾಲ್, ಕಾಂಗ್ರೆಸ್ ನಾಯಕನ ಮಾತು ಸ್ತ್ರೀ ವಿರೋಧಿಯಾಗಿದೆ. ಈ ಹೇಳಿಕೆ ಮಹಿಳಾ ಸಬಲೀಕರಣವನ್ನೇ ಅವಮಾನಿಸಿದೆ. ನಾನು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪರ ಆಡುವಾಗ , ನನಗೆ ಆದ್ಯತೆ ನೀಡಿದೆ. ನನಗೆ ಅವಕಾಶ ಸಿಕ್ಕ ಮೇಲೆ ಭಾರತಕ್ಕಾಗಿ ಗೆಲ್ಲುವುದಕ್ಕೆ ಸಾಧ್ಯವಾಯ್ತು. ಮಹಿಳೆಯರು ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಾಣುವಾಗ, ನಾರಿ ಶಕ್ತಿಯನ್ನು ಸಂಹಾರ ಮಾಡಲಾಗುತ್ತಾ ಇದ್ಯಾ..?

Advertisement

ಪ್ರಧಾನಿ ನರೇಂದ್ರ ಮೋದಿ ಅಬರು ಮಹಿಳೆಯರಿಗಾಗಿ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಾರಿಬಶಕ್ತಿಗೆ ಅಪಮಾನ, ಸ್ತ್ರಿ ದ್ವೇಷಿ ಹೇಳಿಕೆ ನೀಡುವುದು ಬೇಸರದ ಸಂಗತಿಯೇ ಸರಿ ಎಂದು ಸೈನಾ ನೆಹ್ವಾಲ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Advertisement
Tags :
badminton playerdavanageresaina nehwalShamnur shivashankarappaದಾವಣಗೆರೆಬ್ಯಾಡ್ಮಿಟನ್ ಆಟಗಾರ್ತಿಶಾಮನೂರು ಶಿವಶಂಕರಪ್ಪಸೈನಾ ‌ನೆಹ್ವಾಲ್
Advertisement
Next Article