ಬೆಂಗಳೂರಿನಲ್ಲಿ ಜಲಕ್ಷಾಮ ಉಂಟಾಗುವುದಕ್ಕೆ ಕಾರಣವೇನು ಗೊತ್ತಾ..?
ಬೆಂಗಳೂರು: ನಗರಾದ್ಯಂತ ಬೇಸಿಗೆಯ ಆರಂಭದಲ್ಲಿಯೇ ನೀರಿಗೆ ಹಾಹಾಕಾರ ಶುರುವಾಗಿದೆ. ಎಷ್ಟೋ ಏರಿಯಾಗಳಿಗೆ ಈಗಾಗಲೇ ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಪಾರ್ಟ್ಮೆಂಟ್ ಗಳಿಗಂತು ನೀರಿನ ಸಮಸ್ಯೆ ಜೋರು ತಲೆದೂರಿದೆ. ಬೆಂಗಳೂರು ಕೆರೆಗಳ ಊರಾಗಿತ್ತು. ಆದರೆ ಸಿಲಿಕಾನ್ ಸಿಟಿಯಲ್ಲಿ ನೀರಿನ ಕ್ಷಾಮ ಎದುರಾಗಿದ್ದೇಕೆ ಎಂಬುದೇ ಎಲ್ಲರ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.
ನಗರದಲ್ಲಿ ಒಟ್ಟು 4 ಲಕ್ಷ ಕೊಳವೆ ಬಾವಿಗಳಿದೆ. ವಾಡಿಕೆಯಷ್ಟು ಮಳೆಯಾಗದ ಕಾರಣ ಅಂತರ್ಜಲ ಪಾತಾಳ ಸೇರಿದ್ದು, ಶೇ.30ರಿಂದ ಶೇ.40ರಷ್ಟು ಬೋರ್ ವೆಲ್ ಗಳು ಬತ್ತಿ ಹೋಗಿವೆ. 16,781 ಕೊಳವೆ ಬಾವಿಗಳ ಪೈಕಿ 6997 ಬೋರ್ ವೆಲ್ ಗಳು ಬತ್ತಿ ಹೋಗಿವೆ. 7,784 ಕೊಳವೆ ಬಾವಿಗಳಷ್ಟೇ ಚಾಲ್ತಿಯಲ್ಲಿವೆ. ಅದಷ್ಟೇ ಅಲ್ಲ ಸಾರ್ವಜನಿಕರೂ ಸ್ವಂತ ಬಳಕೆಗೆ ಕೊರೆಸಿದ್ದ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಮಟ್ಟ ಕುಸಿತ ಕಂಡಿದೆ.
ಅಂದು ಬೆಂಗಳೂರು ಸುತ್ತಮುತ್ತಲಿನ ವಿಸ್ತಿರ್ಣ ಕಡಿಮೆ ಇತ್ತು. ಆದರೆ ಇಂದು ಆ ವಿಸ್ತೀರ್ಣ 800ರಷ್ಟು ಜಾಸ್ತಿ ಆಗಿದೆ. ಜನಸಂಖ್ಯೆ ಕೂಡ 1.30 ಕೋಟಿಗೆ ಮುಟ್ಟಿದೆ. 2007 ರಲ್ಲಿ ಬಿಬಿಎಂಪಿ ತೆಕ್ಕೆಗೆ 110 ಹಳ್ಳಿ, 7 ನಗರಸಭೆ ಹಾಗೂ ಪುರಸಭೆಗೆ ನೀರು ಕಲ್ಪಿಸಲಾಗಿತ್ತು. ಹೀಗಾಗಿ ಎಲ್ಲಾ ಸಾಕಷ್ಟು ನೀರಿನ ಸಮಸ್ಯೆ ಉಂಟಾಗಿದೆ. ಮಳೆ ಇಲ್ಲದೆ ಕಾವೇರಿ ಕೊಳ್ಳದಲ್ಲೂ ಮಳೆಯಿಲ್ಲದೆ ನೀರಿಗೆ ಅಭಾವ ಬಂದಿದೆ. ಕೆರೆ ಕಟ್ಟೆಗಳು, ಕೊಳವೆ ಬಾವಿಗಳು ಬತ್ತಿ ಹೋಗಿದೆ. ಈ ಎಲ್ಲದರಿಂದಾಗಿ ನೀರಿಗೆ ಸಮಸ್ಯೆಯಾಗಿದೆ. ಹೀಗಾಗಿ ಬೆಂಗಳೂರಿನಾದ್ಯಂತ ನೀರಿಗೆ ಹಾಹಾಕಾರ ಶುರುವಾಗಿದೆ. ಅದಕ್ಕೆ ಜನ ಟ್ಯಾಂಕರ್ ಮೂಲಕ, ಕ್ಯಾನ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ.