Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಐಸಿಸಿ ಅಧ್ಯಕ್ಷರಾದ ಜೈ ಶಾಗೆ ತಿಂಗಳ ಸಂಬಳ ಎಷ್ಟು ಗೊತ್ತಾ..? ಹೋದಲ್ಲಿ ಬಂದಲ್ಲಿ ಎಷ್ಟೆಲ್ಲಾ ಸೌಲಭ್ಯವಿದೆ..?

03:37 PM Aug 29, 2024 IST | suddionenews
Advertisement

ಜೈ ಶಾ.. ಬಹಳ ಕಡಿಮೆ ವಯಸ್ಸಿಗೇನೆ ಉನ್ನತ ಹುದ್ದೆಗೆ ಏರಿರುವ ಹೆಗ್ಗಳಿಕೆ ಇವರದ್ದು. ಈಗಿನ್ನು 35 ವರ್ಷ. ಆದರೆ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ ಜೈ ಶಾ ಅಧ್ಯಕ್ಷರಾಗಿದ್ದಾರೆ. ಅದರಲ್ಲೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ದೇಶಗಳು ಇವರನ್ನು ಒಪ್ಪಿ ಆಯ್ಕೆ ಮಾಡಿದ್ದಾರೆ. ತಮ್ಮ 35ನೇ ವರ್ಷಕ್ಕೆ ಐಸಿಸಿ ಮುಖ್ಯಸ್ಥರಾಗಿರುವ 5ನೇ ಭಾರತೀಯ ಮತ್ತು ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆ ಜೈಶಾ ಅವರದ್ದಾಗಿದೆ. ಐಸಿಸಿ ಅಧ್ಯಕ್ಷರಾಗಿ ಡಿಸೆಂಬರ್ ನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

Advertisement

ಐಸಿಸಿ ಅಧ್ಯಕ್ಷ ರಾಗಿರುವ ಜೈ ಶಾ ಅವರ ಸಂಬಳ ಎಷ್ಟಿರಬಹುದೆಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ. ಹಾಗೇ ಏನೆಲ್ಲಾ ಸೌಲಭ್ಯಗಳು ಸಿಗಬಹುದು ಎಂಬ ಪ್ರಶ್ನೆಯೂ ಕಾಡುತ್ತದೆ. ಯಾಕಂದ್ರೆ ಚಿಕ್ಕ ವಯಸ್ಸಿನಲ್ಲಿಯೇ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದವರು ಅವರು. ಮಾಹಿತಿಗಳ ಪ್ರಕಾರ ಐಸಿಸಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಯಾವುದೇ ನಿರ್ದಿಷ್ಟ ವೇತನವನ್ನು ನಿಗಧಿ ಮಾಡುವುದಿಲ್ಲ. ಜವಾಬ್ದಾರಿ ಮತ್ತು ಕೆಲಸದ ಆಧಾರದ ಮೇಲೆ ಪಾವತಿ ಮಾಡುತ್ತದೆ ಎನ್ನಲಾಗಿದೆ. ಇನ್ನು ಐಸಿಸಿ ಸಭೆ, ಹೋಟೆಲ್ ವಸತಿ, ಪ್ರಯಾಣದ ಟಿಕೆಟ್ ಇವುಗಳ ಕುರಿತಾಗಿ ಐಸಿಸಿ ಇನ್ನು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಜೈ ಶಾ ಬಿಸಿಸಿಐ ನಲ್ಲಿದ್ದಾಗ ದೇಶದಿಂದ ಅಂತರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸಲು 82 ಸಾವಿರ, ಭಾರತದಲ್ಲಿಯೇ ನಡೆಯುವ ಸಭೆಗಳಲ್ಲಿ ಭಾಗವಹಿಸುವುದಕ್ಕೆ 40 ಸಾವಿರ, ಸಭೆಗಳನ್ನು ಹೊರತಾಗಿ ದೇಶದ ಒಳಗೆ ಪ್ರವೇಶಿಸಲು 30 ಸಾವಿರ ರೂಪಾಯಿ ನೀಡುತ್ತಾ ಇತ್ತು. ಇದನ್ನು ಹೊರತುಪಡಿಸಿ ಹೈಫೈ ಸೌಲಭ್ಯಗಳನ್ನು ನೀಡುತ್ತಾ ಇತ್ತು.

Advertisement

Advertisement
Tags :
bengaluruchitradurgaIcc presidentJai ShahJay Shahmonthly salarysuddionesuddione newsಐಸಿಸಿ ಅಧ್ಯಕ್ಷಚಿತ್ರದುರ್ಗಜೈ ಶಾಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article