ರಾಮಮಂದಿರಕ್ಕೆ 15 ದಿನಕ್ಕೆ ಹರಿದು ಬಂದ ಕಾಣಿಕೆ ಎಷ್ಟು ಕೋಟಿ ಗೊತ್ತಾ..?
ಅಯೋಧ್ಯೆ: ರಾಮಮಂದಿರ ನಿರ್ಮಾಣದ ಕನಸು ಹಲವು ವರ್ಷಗಳ ಹಿಂದಿನದ್ದು. ಕಡೆಗೂ ಈ ವರ್ಷ ನನಸಾಗಿದೆ. ಜನವರಿ 22 ರಂದು ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿದೆ. ಅಂದಿನಿಂದ ಸಾರ್ವಜನಿಕರ ಪ್ರವೇಶಕ್ಕೂ ಅನುಮತಿ ನೀಡಲಾಗಿದೆ. ಪ್ರತಿ ದಿನ ಹರಿದು ಬರುತ್ತಿರುವ ಭಕ್ತ ಸಾಗರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬರುತ್ತಿದೆ.
ದೇಶದ ಎಲ್ಲಾ ರಾಜ್ಯಗಳಿಂದಾನೂ ಅಯೋಧ್ಯೆಗೆ ನೇರವಾಗಿ ರೈಲಿನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಹಿರಿಯರಿಂದ ಹಿಡಿದು ಕಿರಿಯರ ತನಕ ರಾಮನನ್ನು ನೋಡಲು ಹೊರಟು ನಿಂತಿದ್ದಾರೆ. ಯಾವುದೇ ರಾಜ್ಯದಿಂದ ಟ್ರೈನ್ ಹೊರಟರು ಇಡೀ ಟ್ರೈನ್ ತುಂಬಿರುತ್ತದೆ. ಹಿಂಗೆ ಪ್ರತಿದಿನ ರಾಮನನ್ನು ನೋಡಲು ಬರುವ ಭಕ್ತರ ಸಂಖ್ಯೆ, ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಕಳೆದ ಹದಿನೈದು ದಿನಕ್ಕೆ ಸುಮಾರು 30 ಲಕ್ಷ ಭಕ್ತಾಧಿಗಳು ಭೇಟಿ ನೀಡಿದ್ದಾರೆ. ರಾಮನನ್ನು ನೋಡಲು ಅಷ್ಟು ದೂರ ಬಂದವರು ರಾಮನಿಗೆ ಹರಕೆಯ ಕಾಣಿಕೆಯನ್ನು ನೀಡಿಯೇ ತೆರಳಿದ್ದಾರೆ. ಭಕ್ತರ ಕಾಣಿಕೆಯನ್ನು ಎಣಿಕೆ ಮಾಡಿದ್ದು, ಕೇವಲ 15 ದಿನಕ್ಕೆ 12.8ಕೋಟಿ ಕಾಣಿಕೆ ಬಂದಿದೆ. ಇದು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ದೇಶ ವಿದೇಶಗಳಿಂದಾನೂ ಬಾಲರಾಮನನ್ನು ನೋಡಲು ಜನಸಾಗರ ಹರಿದು ಬರುತ್ತಿದೆ.
ಬಲರಾಮನ ಮೂರ್ತಿಯನ್ನು ಮೈಸೂರಿನ ಅರುಣ್ ಯೋಗಿರಾಜ್ ನಿರ್ಮಿಸಿದ್ದು, ಅಲಂಕಾರಗೊಂಡ ರಾಮನನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟು ಸುಂದರವಾಗಿ, ಮಗುವಿನಂತೆ, ಮುಗುಳ್ನಗುವಿನಲ್ಲಿಯೇ ಕಂಗೊಳಿಸುತ್ತಿದ್ದಾನೆ ಬಾಲ ರಾಮ. ಹೀಗಾಗಿ ಒಮ್ಮೆ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಪಡೆದು ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.