Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗುರು ಪೂರ್ಣಿಮಾ ಆಚರಣೆಯಂದು ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಸಂಗ್ರಹವಾದ ದೇಣಿಗೆ ಹಣ ಎಷ್ಟು ಕೋಟಿ ಗೊತ್ತಾ ? ತಿರುಪತಿ ತಿಮ್ಮಪ್ಪನ ಆದಾಯಕ್ಕಿಂತಲೂ ಹೆಚ್ಚು...!  

09:05 PM Jul 25, 2024 IST | suddionenews
Advertisement

ಸುದ್ದಿಒನ್, ಜುಲೈ. 25 : ತಿರುಮಲ ತಿರುಪತಿ ದೇವಸ್ಥಾನವು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ ಶಿರಡಿ ದೇವಾಲಯ. ಆದರೆ ಈಗ ತಿರುಪತಿ ತಿಮ್ಮಪ್ಪನ ಆದಾಯಕ್ಕೆ ಶಿರಡಿ ಸಾಯಿಬಾಬಾ ಮಂದಿರ ಪೈಪೋಟಿ ನೀಡುತ್ತಿದೆ.

Advertisement

ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಮಿ ಎಂದು ಆಚರಿಸಲಾಗುತ್ತದೆ. ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಇದೇ 20ರಂದು ಆರಂಭವಾದ ಗುರು ಪೌರ್ಣಮಿ ಮಹೋತ್ಸವ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಭಕ್ತರು ಸಾಯಿಬಾಬಾಗೆ  ಕಾಣಿಕೆಯಾಗಿ ನೀಡಿದ ಹಣದ ಮೊತ್ತ 6 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಸಿಇಒ ಗೋರಕ್ಷಾ ಗಾಡಿಲ್ಕರ್ ತಿಳಿಸಿದ್ದಾರೆ. ಗುರು ಪೌರ್ಣಮಿಯ ದಿನದಂದು ಸಾಯಿಬಾಬಾ ಮಂದಿರಕ್ಕೆ ಸುಮಾರು 2 ಲಕ್ಷ ಜನರು ಬಂದು ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ಗುರುಪೂರ್ಣಿಮೆ ನಿಮಿತ್ತ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ನಗದು ರೂಪದಲ್ಲಿ 2 ಕೋಟಿ 50 ಲಕ್ಷ ರೂಪಾಯಿಗಳು,  ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಸೇರಿದಂತೆ ಆನ್‌ಲೈನ್‌ನಲ್ಲಿ 1 ಕೋಟಿಗೂ ಹೆಚ್ಚು ದೇಣಿಗೆ,  ಚೆಕ್‌ಗಳು, ಮನಿ ಆರ್ಡರ್‌ಗಳ ರೂಪದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ದೇಣಿಗೆ ಬಂದಿದೆ. ಹಾಗೂ ಇನ್ನು ಕೆಲವು ಭಕ್ತರು ಚಿನ್ನ ಬೆಳ್ಳಿ ಕಾಣಿಕೆ ನೀಡಿದ್ದಾರೆ. ಇವುಗಳ ಮೌಲ್ಯ 10 ಲಕ್ಷ ರೂಪಾಯಿ ಆಗಲಿದೆ ಎಂದು ತಿಳಿದುಬಂದಿದೆ. ಸಾಯಿಬಾಬಾರವರ ವಿಶೇಷ ದರ್ಶನಕ್ಕೆ ರೂ. 200 ಟಿಕೆಟ್ ನೀಡಿದ್ದು, ಲಡ್ಡು ಮಾರಾಟದ ಮೂಲಕ 62 ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸಿರುವುದು ತಿಳಿದು ಬಂದಿದೆ. ಸಾಯಿಬಾಬಾ ಪ್ರಸಾದ ನಿಲಯದಲ್ಲಿ 1 ಲಕ್ಷ 90 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.

Advertisement

ಗುರು ಪೌರ್ಣಮಿ ಆಚರಣೆಯ ಮೂರು ದಿನಗಳ ಕಾಲ ಶಿರಸಿ ಪಟ್ಟಣವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಜುಲೈ 21 ರಂದು ಜಪಾನ್‌ನಿಂದ 18 ಭಕ್ತರು ಬಾಬಾರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಗುರು ಪೌರ್ಣಮಿಯಂದು ಶಿರಡಿ ಸಾಯಿ ದರ್ಶನ ಪಡೆಯುತ್ತಿದ್ದರು. ಶಿರಡಿಗೆ ಭೇಟಿ ನೀಡುವ ಭಕ್ತರಿಗೆ ಮತ್ತಷ್ಟು ಹೆಚ್ಚಿನ ಆನಂದ ನೀಡಲು ಥೀಮ್ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕಾಗಿ ರಾಜ್ಯ ಸರಕಾರ 40 ಕೋಟಿ ರೂಪಾಯಿ ಶಿರಡಿ ನಗರದಲ್ಲಿ 22 ಎಕರೆ ಪ್ರದೇಶದಲ್ಲಿ ಯೋಜನೆ ನಿರ್ಮಾಣವಾಗಲಿದೆ. ಇದರಲ್ಲಿ ಬಾಬಾರವರ ಜೀವನ ಸಾರುವ ಲೇಸರ್ ಶೋ ಏರ್ಪಡಿಸಲಾಗುವುದು.

Advertisement
Tags :
bengaluruchitradurgacollectedcrores of moneyGuru Purnima celebrationsincomeShirdi Saibaba templesuddionesuddione newsTirupati Thimpappaಆದಾಯಕೋಟಿಗುರು ಪೂರ್ಣಿಮಾ ಆಚರಣೆಚಿತ್ರದುರ್ಗತಿರುಪತಿ ತಿಮ್ಮಪ್ಪದೇಣಿಗೆಬೆಂಗಳೂರುಶಿರಡಿ ಸಾಯಿಬಾಬಾ ದೇವಾಲಯಸಂಗ್ರಹಸುದ್ದಿಒನ್ಸುದ್ದಿಒನ್ ನ್ಯೂಸ್ಹಣ
Advertisement
Next Article