For the best experience, open
https://m.suddione.com
on your mobile browser.
Advertisement

ಡಿಕೆ ಶಿವಕುಮಾರ್ ಹುಟ್ಟುಹಬ್ಬ..ಮೈಡಿಯರ್ ಫ್ರೆಂಡ್ ಎಂದ ಸಿಎಂ ಸಿದ್ದರಾಮಯ್ಯ.. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

05:25 PM May 15, 2024 IST | suddionenews
ಡಿಕೆ ಶಿವಕುಮಾರ್ ಹುಟ್ಟುಹಬ್ಬ  ಮೈಡಿಯರ್ ಫ್ರೆಂಡ್ ಎಂದ ಸಿಎಂ ಸಿದ್ದರಾಮಯ್ಯ   ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್
Advertisement

ಬೆಂಗಳೂರು: ಇಂದು ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 62ನೇ ವಸಂತಕ್ಕೆ ಕಾಲಿಟ್ಟ ಡಿಕೆಶಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಸ್ಪೆಷಲ್ ವಿಶ್ ಎಲ್ಲರ ಗಮನ ಸೆಳೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗಿನ ಫೋಟೋ ಹಾಕಿ 'ಮೈ ಡಿಯರ್ ಫ್ರೆಂಡ್' ಎಂದು ಶುರು ಮಾಡಿದ್ದಾರೆ.

Advertisement
Advertisement

ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದು, ಮೈ ಡಿಯರ್ ಫ್ರೆಂಡ್ ಅಂಡ್ ಸಹದ್ಯೋಗಿ. ನಿಮ್ಮ ಶ್ರದ್ಧೆ, ಸಂಘಟನಾ ಕೌಶಲ್ಯ, ಬದ್ಧತೆ ಯಾವಾಗಲೂ ಎದ್ದು ಕಾಣುತ್ತದೆ. ನಿಮಗೆ ಯಶಸ್ಸು, ಖುಷಿ ಸಿಗಲಿ ಎಂದು ಹಾರೈಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ನಿಮ್ಮ ಹಾರೈಕೆಗೆ ಧನ್ಯವಾದಗಳು.ನಾಡಿನ ಜನರ ಕಲ್ಯಾಣಕ್ಕಾಗಿ ಒಟ್ಟಿಗೆ ಶ್ರಮಿಸೋಣಾ ಎಂದಿದ್ದಾರೆ.

Advertisement

ಇನ್ನು ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಕಾರ್ಯಕರ್ತರು ಎಲ್ಲರೂ ಶುಭಕೋರುತ್ತಿದ್ದಾರೆ. ರಾಜಕೀಯ ಗಣ್ಯರು ಸಹ ಶುಭಕೋರಿದ್ದಾರೆ. ಇನ್ನು ಸಂಸದ ಸುರೇಶ್ ಅಣ್ಣನಿಗಾಗಿ ಸ್ಪೆಷಲ್ ಸಾಂಗ್ ಒಂದನ್ನು ಎಡುಟ್ ಮಾಡಿಸಿ, ಫೋಟೋ ಹಾಕಿ ಶುಭಕೋರಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕನ್ನಡಿಗರ ಭರವಸೆಯ ನಾಯಕ, ಪ್ರೀತಿಯ ಸಹೋದರ ಡಿ.ಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಹಾಗೂ ಮತ್ತಷ್ಟು ಜನಸೇವೆ ಮಾಡಯವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭಕೋರಿದ್ದಾರೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಡಿಕೆ ಶಿವಕುಮಾರ್ ಅವರ ಬರ್ತ್ ಡೇ ಟ್ರೆಂಡಿಂಗ್ ನಲ್ಲಿದೆ.

Advertisement
Advertisement

Advertisement
Tags :
Advertisement