For the best experience, open
https://m.suddione.com
on your mobile browser.
Advertisement

ತುರ್ತು ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್: ಸಿದ್ದರಾಮಯ್ಯಗೆ ಬೆಂಬಲ ಘೋಷಣೆ

04:43 PM Aug 17, 2024 IST | suddionenews
ತುರ್ತು ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್  ಸಿದ್ದರಾಮಯ್ಯಗೆ ಬೆಂಬಲ ಘೋಷಣೆ
Advertisement

Advertisement
Advertisement

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಶಾಕಿಂಗ್ ಆದಂತ ಬೆಳವಣಿಗೆ ನಡೆದಿದೆ. ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದಾರೆ. ಸಿದ್ದರಾಮಯ್ಯ ಅವರ ಪರವಾಗಿ ಇಡೀ ಸಚಿವ ಸಂಪುಟವೇ ನಿಂತಿದೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಇಂದು ಬೆಳಗ್ಗೆ ರಾಜ್ಯಪಾಲರು ಸಂವಿಧಾನದ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಪತ್ರವನ್ನು ಕಳುಹಿಸಿ ಕೊಟ್ಟಿದ್ದಾರೆ. ಕಳೆದ ಜೂನ್ 27 ರಂದೇ ರಾಜ್ಯಪಾಲರು ನೋಟೀಸ್ ಕೊಟ್ಟಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಯಾವ ಲೋಪದೋಷಗಳು ಆಗಿಲ್ಲ ಎಂದು ಸವಿವರವಾಗಿ ಉತ್ತರವನ್ನು ಕೊಟ್ಟಿದ್ದಾರೆ. ರಾಜ್ಯೊಅಲರ ಹುದ್ದೆಗೆ ತನ್ನದೇ ಆದ ಗೌರವವಿದೆ. ಗವರ್ನರ್ ನೇರವಾಗಿ ಪತ್ರ ಕಳುಹಿಸಿಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್ ಕೊಡಬೇಕಾದರೆ ವಿಚಾರಣೆ ನಡೆಯಬೇಕು. ಲೋಕಾಯುಕ್ತ ಬೇರೆ ತನಿಖೆಯಾಗಬೇಕು. ಒಂದೇ ದಿನ.. ಅರ್ಜಿ ಬರುತ್ತೆ ನೋಟೀಸ್ ಕೊಡ್ತಾರೆ. ಇದನ್ನ ನಾವೂ ಪ್ರಶ್ನಿಸಿ ಅವರಿಗೆ ಮನವಿ ಮಾಡಿದ್ದೆವು. ಅದನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ. ಸೆಕ್ರೆಟರಿ ಕಡೆಯಿಂದ ಇವತ್ತು ಆದೇಶ ಮಾಡಿದ್ದಾರೆ.

Advertisement
Advertisement

ಇದು ಎಲ್ಲಾ ಶಾಸಕರ ವಿರುದ್ಧ ಹಾಗೂ ರಾಜ್ಯದ ಜನರ ವಿರುದ್ಧ ಕೊಟ್ಟಿರುವ ಆದೇಶವಾಗಿದೆ. ರಾಜ್ಯಪಾಲರ ಕಚೇರಿಯನ್ನು ಉಪಯೋಗಿಸಿ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಪ್ರಹ್ಲಾದ್ ಜೋಶಿ ಹಾಗೂ ಕುಮಾರಸ್ವಾಮಿ ತೆಗೆಯುತ್ತೇವೆ ಅಂದ್ರು. ಅದಕ್ಕೆ ಪೂರಕವಾಗಿ ಷಡ್ಯಂತ್ರ ನಡೆಯುತ್ತಿದೆ. ನಾವೆಲ್ಲರೂ ಸಿದ್ದರಾಮಯ್ಯ ಪರ ನಿಲ್ಲುತ್ತೇವೆ. ಕಾಂಗ್ರೆಸ್ ಪಕ್ಷ ಕೂಡ ಸಿದ್ದರಾಮಯ್ಯ ಅವರ ಬೆನ್ನಿಗೆ ಇದೆ. ಇದರ ವಿರುದ್ಧ ನಾವೂ ಹೋರಾಡಬೇಕಿದೆ. ಹಿಂದುಳಿದ ನಾಯಕನನ್ನು ಇವರುಗಳಿಗೆ ಸಹಿಸಲಾಗುತ್ತಿಲ್ಲ ಎಂದಿದ್ದಾರೆ.

Advertisement
Tags :
Advertisement