Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸೂಜಿ, ಕತ್ತಿ ಹೋಲಿಕೆ ನೀಡಿ ಬಿಜೆಪಿಯನ್ನು ವ್ಯಂಗ್ಯವಾಡಿದ ಡಿಕೆ ಶಿವಕುಮಾರ್

04:34 PM Oct 06, 2023 IST | suddionenews
Advertisement

 

Advertisement

ಬೆಂಗಳೂರು: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಈದ್ ಮಿಲಾದ್ ವೇಳೆ ನಡೆದ ಗಲಾಟೆ ಸಂಬಂಧ ಇನ್ನು ಪರಿಸ್ಥಿತಿ ಸಂಪೂರ್ಣವಾಗಿ ಸರಿಯಾಗಿಲ್ಲ. ಪೊಲೀಸರು ಕಾವಲಿದ್ದು, 144 ಸೆಕ್ಷನ್ ಕೂಡ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ಸತ್ಯ ಶೋಧನೆಗೆಂದು ಹೋಗಿದ್ದಾರೆ.

ನಿನ್ನೆ ಬಿಜೆಪಿ ನಾಯಕರ ತಂಡ ಸತ್ಯಶೋಧನೆಗೆಂದು ರಾಗಿಗುಡ್ಡಕ್ಕೆ ಭೇಟಿ ನೀಡಿತ್ತು. ಅಲ್ಲಿ ಹಲವರನ್ನು ಭೇಟಿ ಮಾಡಿ, ನಡೆದ ಘಟನೆಯ ಬಗ್ಗೆ ತಿಳಿಯುವುದಕ್ಕೆ ಪ್ರಯತ್ನಿಸಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯೇ ತಿರುಗೇಟು ನೀಡಿದ್ದರು. ಬಿಜೆಪಿ ನಾಯಕರು ಸತ್ಯಶೋಧನೆಗೆಂದು ಅಲ್ಲಿ ಹೋಗಿರುವುದು ಯಾಕೆಂದು ಹೇಳಿದ್ದರು. ಹಾಗೇ ಕಾನೂನು, ಪೊಲೀಸರು ಇಲ್ವಾ ಎಂದೇ ಉತ್ತರಿಸಿದ್ದರು. ಇದೀಗ ಬಿಜೆಪಿಗರ ಸತ್ಯಶೋಧನೆಯ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

Advertisement

'ನಾವೂ ಸೂಜಿ ತರಹ ಕೆಲಸ ಮಾಡಿದರೆ, ಬಿಜೆಪಿ ನಾಯಕರು ಕತ್ತರಿ ರೀತಿ ಕೆಲಸ ಮಾಡುತ್ತಾರೆ. ಅವರ ಸತ್ಯಶೋಧಕ ಏನಿದೆ..? ಅವರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಾವೂ ಸಮಾಜವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಸೂಜಿಯ ರೀತಿ ಹೊಲಿಯುವ ಕೆಲಸ ಮಾಡಿದರೆ, ಅವರು ಕತ್ತಿ ಥರ ಒಡೆಯುವ ರೀತಿ ಕೆಲಸ ಮಾಡುತ್ತಿದ್ದಾರೆ. ಇದೆ ಬಿಜೆಪಿಗೂ ಕಾಂಗ್ರೆಸ್ ಗೂ ಇರುವ ವ್ಯತ್ಯಾಸ ಎಂದಿದ್ದಾರೆ.

Advertisement
Tags :
bengalurudk shivakumarsuddioneಆಕ್ರೋಶಕತ್ತಿಡಿಕೆ ಶಿವಕುಮಾರ್ಡಿಕೆಶಿಬಿಜೆಪಿವ್ಯಂಗ್ಯಸುದ್ದಿಒನ್ಸೂಜಿ
Advertisement
Next Article