For the best experience, open
https://m.suddione.com
on your mobile browser.
Advertisement

ಮೈಕ್ರೋ ಫೈನಾನ್ಸ್ ವಿರುದ್ಧದ ಅಪಪ್ರಚಾರವನ್ನು ಪರಿಗಣಿಸದಿರಿ : ಜಿಲ್ಲಾಧಿಕಾರಿಗೆ ಮನವಿ

05:55 PM Oct 04, 2024 IST | suddionenews
ಮೈಕ್ರೋ ಫೈನಾನ್ಸ್ ವಿರುದ್ಧದ ಅಪಪ್ರಚಾರವನ್ನು ಪರಿಗಣಿಸದಿರಿ   ಜಿಲ್ಲಾಧಿಕಾರಿಗೆ ಮನವಿ
Advertisement

Advertisement

ಸುದ್ದಿಒನ್, ಹಾವೇರಿ : ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಗಳು ಆಧಾರರಹಿತವಾಗಿ ಕೈಸಾಲ ನೀಡಿ ದುಬಾರಿ ಬಡ್ಡಿಯನ್ನು ವಸೂಲಿ ಮಾಡುತ್ತಿವೆ ಎಂದು ಹಲವೆಡೆಗಳಲ್ಲಿ ದೂರು ನೀಡುತ್ತಿರುವುದನ್ನು ಪರಿಗಣಿಸಬಾರದೆಂದು ನವಚೇತನ ಮೈಕ್ರೋ ಫೈನಾನ್ಸ್ ವತಿಯಿಂದ ಸಿ. ಕೊಟ್ರಗೌಡ. ಮತ್ತು ಸಿ. ತಿಪ್ಪೇಸ್ವಾಮಿ. ನೇತೃತ್ವದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳೊಂದಿಗೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು.

Advertisement

ಮೈಕ್ರೋ ಫೈನಾನ್ಸ್ ಸಂಸ್ಥೆ ಯವರು RBI ಸೂಚನೆ ಯಂತೆ ಕೆಲಸ ಮಾಡುತ್ತಿದ್ದು, ನಿಜವಾದ ಗ್ರಾಹಕರಿಗೆ ಯಾವುದೇ ತೊಂದರೆ ಕೊಡದೆ ಕೋಡ್ ಆಫ್ ಕಂಡಕ್ಟ್ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದನ್ನು ಮಧ್ಯವರ್ತಿ ಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕಗಳಿಂದ ಸೌಲಭ್ಯ ವಂಚಿತ ಗೊಂಡಿರುವ ಹಾಗೂ ಬಡಕುಟುಂಬ ಗಳಿಗೆ ಯಾವುದೇ ಅಡಮಾನ ತೆಗೆದುಕೊಳ್ಳದೆ ಕೇವಲ ಒಂದು ಆಧಾರ ಕಾರ್ಡ್ ತೆಗೆದು ಕೊಂಡು ಒಂದು ಗುಂಪಿನ ಆಧಾರದ ಮೇಲೆ ಸಾಲ ಮಂಜೂರಾತಿ ಮಾಡುತ್ತಿವೆ.

ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಬಡತನ ಎದ್ದು ಕಾಣುತ್ತಿದ್ದು, ಬಡತನ ಕಡಿಮೆ ಮಾಡಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಉದ್ದೇಶ ದಿಂದ ಮೈಕ್ರೋ ಫೈನಾನ್ಸ್ ಸಂಸ್ಥೆ ಯವರು ಗ್ರಾಹಕರ ಮನೆಗೆ ಹೋಗಿ ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಹೈ ಮಾರ್ಕ್ ಪರಿಶೀಲನೆ ಮಾಡಿದಾಗ ಅವರು ಸಾಲವನ್ನು ತೆಗೆದು ಕೊಳ್ಳುವುದಕ್ಕೆ ಎಷ್ಟು ಅರ್ಹರು ಎಂಬುದನ್ನು ಪರಿಶೀಲಿಸಿ ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ ಸಾಲವನ್ನು ಅಧಿಕೃತ ವಾಗಿ ಮಂಜೂರು ಮಾಡುತ್ತವೆ.

ಆದರೆ ಇದನ್ನೆಲ್ಲಾ ಮಧ್ಯವರ್ತಿಗಳು ಕೆಲ ಆಮಿಷಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ನಿಜವಾದ ಗ್ರಾಹಕರು ಇದನ್ನ ಸದುಪಯೋಗ ಪಡಿಸಿಕೊಂಡು ಅವರ ಆರ್ಥಿಕ ಪರಿಸ್ಥಿತಿ ಯನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಕುಟುಂಬ ಗಳ ಸಾಕಷ್ಟು ಉಧಾಹರಣೆ ಗಳು ಇದ್ದಾವೆ ಹಾಗೂ ರಾಷ್ಟ್ರೀಕೃತ ಬ್ಯಾಂಕು ಗಳು ಮಾಡದ ಕೆಲಸ ವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆ ಗಳು ಮಾಡುತ್ತಿವೆ.

ಇದರಿಂದ ಬಡ ಕುಟುಂಬ ದಿಂದ ಬಂದ ಲಕ್ಷಾಂತರ ನಿರುದ್ಯೋಗಿ ಯುವಕ ಯುವತಿಯರಿಗೆ ಕೆಲಸ ಕೊಟ್ಟು ಸರ್ಕಾರ ಕ್ಕೆ 25% ನಿರುದ್ಯೋಗ ಸಮಸ್ಯೆ ಯನ್ನು ಕಡಿಮೆ ಮಾಡಿದೆ ಇದನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯವರು ಮತ್ತು ಅವರ ಕುಟುಂಬ ದವರು ಹೆಮ್ಮೆ ಇಂದ ಹೇಳಿಕೊಳ್ಳುತ್ತಿ ದ್ದಾರೆ ಒಟ್ಟಾರೆ ಯಾಗಿ ಹೇಳಬೇಕೆಂದರೆ ಒಂದು ಬಡ ಕುಟುಂಬ ಗಳ ಆರ್ಥಿಕ ಸುಧಾರಣೆ ಮಾಡುವುದು ಇನ್ನೊಂದು ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವುದು ಇದರ ಉದ್ದೇಶ ಹಾಗಾಗಿ ತಾವುಗಳು ದಯಮಾಡಿ ಇಂತಹ ಮಧ್ಯವರ್ತಿಗಳ ಮನವಿಯನ್ನು ತಿರಸ್ಕಾರ ಮಾಡಬೇಕೆಂದು ಮನವಿ ಮಾಡಿದರು.

Advertisement
Tags :
Advertisement