For the best experience, open
https://m.suddione.com
on your mobile browser.
Advertisement

ಅದ್ದೂರಿಯಾಗಿ ನೆರವೇರಿತು ನಿರ್ದೇಶಕ ತರುಣ್- ನಟಿ ಸೋನಲ್ ಮದುವೆ

02:35 PM Aug 11, 2024 IST | suddionenews
ಅದ್ದೂರಿಯಾಗಿ ನೆರವೇರಿತು ನಿರ್ದೇಶಕ ತರುಣ್  ನಟಿ ಸೋನಲ್ ಮದುವೆ
Advertisement

Advertisement
Advertisement

ಬೆಂಗಳೂರು : ಕಳೆದ ಒಂದು ವರ್ಷದಿಂದ ಪ್ರೀತಿಸಿತ್ತಿದ್ದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೆಂಥೋರೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಆಶೀರ್ವಾದದೊಂದಿದೆ ತರುಣ್ ಮತ್ತು ಸೋನಲ್ ಸತಿ ಪತಿಗಳಾಗಿದ್ದಾರೆ. ಬೆಂಗಳೂರಿನಲ್ಲಿಯೇ ಸಾಂಪ್ರದಾಯಿಕವಾಗಿ ಮದುವೆ ನೆರವೇರಿದೆ.

ಇಬ್ಬರ ಮದುವೆಗೂ ಸ್ಯಾಂಡಲ್ ವುಡ್ ತಾರೆಯರು, ರಾಜಕಾರಣಿಗಳು ಬಂದು ಆಶೀರ್ವದಿಸಿದ್ದಾರೆ. ಇಂದು ತರುಣ್ ಸುಧೀರ್ ತಾಯಿ ಮಾಲತಿ ಸುಧೀಂದ್ರ ಅವರ ಕನಸು ನನಸಾದ ದಿನವಾಗಿದೆ. ಮಗನ ಮದುವೆಯನ್ನು ನೋಡಬೇಕೆಂಬ ಆಸೆ ಅವರದ್ದಾಗಿತ್ತು. ದೊಡ್ಡ ಮಗ ನಂದಕಿಶೋರ್ ಅವರಿಗೆ ಈಗಾಗಲೇ ಮದುವೆಯಾಗಿ ಮಗು ಕೂಡ ಇದೆ. ಆದರೆ ತರುಣ್ ಸುಧೀರ್ ಅವರಿಗೆ ಮದುವೆ ಫಿಕ್ಸ್ ಆಗುತ್ತಿಲ್ಲ ಎಂಬ ಕೊರಗು ಅವರಲ್ಲಿತ್ತು. ತರುಣ್ ಅವರನ್ನು ನೋಡಿಕೊಳ್ಳುವುದಕ್ಕೆ ಯಾರಾದರೂ ಬೇಕಿತ್ತು. ಈಗ ಆ ನೋವು ಕಡಿಮೆಯಾಗಿದೆ. ತಾನಂದುಕೊಂಡಂತೆ ಮಗನ ಮದುವೆಯನ್ನು ಅದ್ದೂರಿಯಾಗಿಯೇ ಮಾಡಿದ್ದಾರೆ.

Advertisement
Advertisement

ಸೋನಲ್ ಅವರನ್ನು ಗ್ರ್ಯಾಂಡ್ ಆಗಿ ಬರ ಮಾಡಿಕೊಂಡರು. ಯುವತಿಯರು ಡ್ಯಾನ್ಸ್ ಮಾಡುವ ಮೂಲಕ ಸೋನಲ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಬ್ಬರು ಮದುವೆಯಾಗಿದ್ದಾರೆ. ತರುಣ್ ಸುಧೀರ್ ತಾಳಿ ಕಟ್ಟುತ್ತಿದ್ದಂತೆ ಸೋನಲ್ ಭಾವುಕರಾಗಿದ್ದಾರೆ. ಕಣ್ಣಲ್ಲಿ ನೀರಿ ಬಂದಿದೆ. ಬಳಿಕ ತನ್ನ ತರುಣ್ ಸುಧೀರ್ ತನ್ನ ಪ್ರೀತಿಯ ಮಡದಿಯ ಹಣೆಗೆ ಮುತ್ತಿಟ್ಟಿದ್ದಾರೆ. ಇಂಡಸ್ಟ್ರಿಯ ಕಲಾವಿದರು, ಸ್ನೇಹಿತರೆಲ್ಲ ಸೇರಿ ತರಿಣ್ ಸುಧೀರ್ ಮದುವೆ ಆಗಮಿಸಿ, ನವ ವಧು ವರರಿಗೆ ಆಶೀರ್ವದಿಸಿದ್ದಾರೆ. ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರದಿಂದಾನೂ ಸ್ನೇಹಿತರು ಜೊತೆಗೆ ನಿಂತಿದ್ದಾರೆ. ಇಂದು ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿದೆ.

Advertisement
Tags :
Advertisement