ಕೊಬ್ಬರಿ ಬೆಳೆಗಾರರಿಗೆ ಸಂಕಷ್ಟ : ಚುನಾವಣೆ ಹಿನ್ನೆಲೆ ಖರೀದಿ ಮೇಲೆ ಪರಿಣಾಮ ಬೀರುತ್ತಾ..?
ತುಮಕೂರು: ಏಪ್ರಿಲ್ 1ರಿಂದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕಿಬ್ಬರಿ ಖರೀದಿಗೆ ಸಮಯ ನಿಗದಿಯಾಗಿತ್ತು. ಈ ಸಂಬಂಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಚುನಾವಣಾ ಹಿನ್ನೆಲೆ ತಡವಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದರಿಂದ ರೈತರಿಗೂ ಸಂಕಷ್ಟ ಎದುರಾಗುತ್ತಿದೆ.
ಮಾರ್ಚ್ 4ರಿಂದ 9ರವರೆಗೂ ನಡೆದ ರೈತರ ನೋಂದಣಿ ಕಾರ್ಯದಲ್ಲಿ ರಾಜ್ಯದ ಒಂಭತ್ತು ಜಿಲ್ಲೆಗಳಿಂದ 58,893 ರೈತರು ನೋಂದಣಿ ಮಾಡಿದ್ದರು. ತುಮಕೂರು ಜಿಲ್ಲೆಯ ಒಂದರಲ್ಲಿಯೇ 27,212 ರೈತರು ನೋಂದಣಿ ಮಾಡಿದ್ದಾರೆ. ಕೊಬ್ಬರಿ ಖರೀದಿಸಲು ಸರ್ವ ಸಿದ್ಧತೆ ಮಾಡಲಾಗಿದೆ. ಕೊಬ್ಬರಿಯ ಗುಣಮಟ್ಟ ಪರೀಕ್ಷೆ, ತೂಕ ತೆಗೆದುಕೊಳ್ಳುವುದು, ರಾಶಿ ಮಾಡುವುದು ,ಚೀಲಕ್ಕೆ ತುಂಬಿದ ಬಳಿಕ ಗೋದಾಮಿಗೆ ಸಾಗಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಎಪಿಎಂಸಿ ಸಿಬ್ಬಂದಿ ಮಾಡಬೇಕಿದೆ. ಆದರೆ ಲೋಕಸಭಾ ಚುನಾವಣೆಗೆ ನೇಮಕ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಕಳೆದ ಬಾರಿ ನೋಂದಣಿ ಮತ್ತು ಖರೀದಿಯನ್ನು ನಾಫೆಡ್ ನಿರ್ವಹಿಸಿತ್ತು. ಈ ಬಾರಿ ತುಮಕೂರು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಎಪಿಎಂಸಿಗೆ ವಹಿಸಿರುವುದರಿಂದ ಜಿಲ್ಲೆಯ ಅಧಿಕಾರಿಗಳು., ಸಿಬ್ಬಂದು ಜೊತೆಗೆ ಬೇಋ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲೆಗೆ ಕರೆಸಿ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಯೋಜನೆ ಮಾಡಲಾಗಿತ್ತು. ಅದರಂತೆ ನೋಂದಣಿ ಸಮಯದಲ್ಲಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿಗಳು ಬಂದು ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಆದರೆ ಈಗ ಜಿಲ್ಲೆಯ ಎಪಿಎಂಸಿ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುವುದರಿಂದ ಕೊಬ್ಬರಿ ಖರೀದಿ ಪ್ರಕ್ರಿಯೆಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ.